ಫೇಸ್'ಬುಕ್'ನೊಂದಿಗೆ ವಾಟ್ಸ್'ಆ್ಯಪ್'ನಲ್ಲಿ ಮಾಹಿತಿ ಹಂಚಿಕೊಳ್ಳಬೇಡಿ

By Internet DeskFirst Published Sep 23, 2016, 4:48 PM IST
Highlights

ನವದೆಹಲಿ(ಸೆ.23): ಬಳಕೆದಾರರ ಸೆ. 25ರೊಳಗಿನ ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳದಂತೆ ದೆಹಲಿ ಹೈಕೋರ್ಟ್‌ ಇಂದು ಜನಪ್ರಿಯ ಮೆಸೇಜಿಂಗ್‌ ಸಾಫ್ಟ್‌ವೇರ್‌ ವಾಟ್ಸ್‌ಆ್ಯಪ್‌ಗೆ ಸೂಚಿಸಿದೆ.

ವಾಟ್ಸ್‌ಆ್ಯಪ್‌ ಸೆ.25ರಿಂದ ಹೊಸ ಪ್ರೈವಸಿ ನೀತಿಯನ್ನು ಅನುಷ್ಠಾನಕ್ಕೆ ತರುವುದಾಗಿ ಘೋಷಿಸಿತ್ತು. ಅದರಂತೆ ತನ್ನ ಬಳಕೆದಾರರ ಫೋನ್‌ ನಂಬರ್‌ ಸೇರಿದಂತೆ ಇತರೆ ಮಾಹಿತಿಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಾಗಿ ಘೋಷಿಸಿತ್ತು. ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಜಿ. ರೋಹಿಣಿ ಅವರಿದ್ದ ಪೀಠವು ಬಳಕೆದಾರರ ಹಿತಾಸಕ್ತಿಯನ್ನು ಕಾಪಾಡುವ ಸೆ.25ರೊಳಗೆ ಈ ಮೆಸೇಜಿಂಗ್‌ ನೆಟ್‌ವರ್ಕಿಂಗ್‌ ಸೈಟ್‌ನಿಂದ ಹೊರಬರಲು ನಿರ್ಧರಿಸುವ ವ್ಯಕ್ತಿಗಳ ಮಾಹಿತಿಗಳನ್ನು ಅಳಿಸಿ ಹಾಕುವಂತೆ ಸೂಚಿಸಿದೆ.

Latest Videos

‘‘ಯಾರು ತನ್ನ ಮಾಹಿತಿ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಬಾರದೆಂದು ಇಚ್ಛಿಸುತ್ತಾರೋ ಅಂಥವರು ತಮ್ಮ ವಾಟ್ಸ್‌ಆ್ಯಪ್‌ ಖಾತೆ ಡಿಲಿಟ್‌ ಮಾಡಬೇಕು. ಇಲ್ಲದಿದ್ದರೆ, ವಾಟ್ಸ್‌ಆ್ಯಪ್‌ ಗ್ರಾಹಕರ ಫೋನ್‌ ನಂಬರ್‌ ಸೇರಿದಂತೆ ಇತರ ಮಾಹಿತಿಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಂಡಲ್ಲಿ ಈ ಬಗ್ಗೆ ದೂರು ನೀಡುವಂತಿಲ್ಲ,’’ ಎಂದು ದೆಹಲಿ ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಕರ್ಮಣ್ಯ ಸಿಂಗ್‌ ಸರೀನ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿದೆ.

click me!