
ಬೆಂಗಳೂರು(ಸೆ. 22): ಕಾವೇರಿ ವಿಷಯದಲ್ಲಿ ಗೊಂದಲಕ್ಕೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಕೊನೆಗೂ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಸೆ.23ರವರೆಗೂ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯಾಗಲ್ಲ. ಸದನ ಸಭೆಗಳ ತೀರ್ಮಾನದ ನಂತರವೇ ಅಂತಿಮ ನಿರ್ಧಾರ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಇಷ್ಟೆಲ್ಲಾ ತೀರ್ಮಾನಕ್ಕೆ ಬರುವ ಮುನ್ನ ಸಿದ್ದರಾಮಯ್ಯ ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ರಚನೆಯಾದ ಮೂರೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ದೇವೇಗೌಡರನ್ನು ಭೇಟಿಯಾದರು. ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಕಾವೇರಿ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಗೌಡರಿಂದ ಸಿಕ್ಕಿದ್ದು ನೀರು ಬಿಡಲೇಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಅಭಯದ ಮಾತು..
'ಯಾವುದೇ ಪರಿಣಾಮವನ್ನು ಎದುರಿಸಲು ಸಜ್ಜಾಗಿ'
ದೇವೇಗೌಡರು ಸಿಎಂಗೆ ತಮಿಳುನಾಡಿಗೆ ಕಾವೇರಿ ನೀರು ಬಿಡಲೇ ಬೇಡಿ ಎಂದಿದ್ದಾರೆ. ಜೊತೆಗೆ ಇದರಿಂದ ಎದುರಾಗುವ ಯಾವುದೇ ಪರಿಣಾಮವನ್ನು ಎದುರಿಸಲು ಸಜ್ಜಾಗಿ, ಕೋರ್ಟ್'ನಿಂದ ಸಮಸ್ಯೆ ಎದುರಾಗಬಹುದು ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಅಭಯ ಕೊಟ್ಟಿದ್ದಾರೆ. ಜೊತೆಗೆ ವಿಶೇಷ ಅಧಿವೇಶನ ಕರೆದು ನಿರ್ಣಯ ತೆಗೆದುಕೊಳ್ಳಿ ಎನ್ನೋ ಸಲಹೆಯನ್ನು ಕೊಟ್ಟರು.
ದೇವೇಗೌಡರ ನಿವಾಸದಿಂದ ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷ ಸಭೆ ಬಂದರು. ಗೌಡರು ಕೂಡಾ ಸರ್ವಪಕ್ಷ ಸಭೆಗೆ ಹಾಜರಾದರು. ಸಭೆಯಲ್ಲಿ ಸಿದ್ದರಾಮಯ್ಯ ಕೂಡಾ ದೇವೇಗೌಡರ ಜೊತೆಯೇ ಕೂತಿದ್ದರು. ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಗೌಡರು ಮಾತನಾಡಿದರು. ಸರ್ಕಾರ ಮುಂದೇನು ಮಾಡಬೇಕು. ಏನು ಮಾಡಿದ್ರೆ ಒಳ್ಳೇದು ಅನ್ನೋದರ ಬಗ್ಗೆ ಮಾಹಿತಿ ನೀಡಿದರು.
ಒಟ್ಟಿನಲ್ಲಿ, ಒಂದು ಕಾಲದ ಗುರು-ಶಿಷ್ಯರ ನಡುವಿನ ಚರ್ಚೆಗೆ ಸರಿಯಾಗೇ ಫಲ ಸಿಕ್ಕಿದೆ. ಗೌಡರ ಜೊತೆಗಿನ ಸಮಾಲೋಚನೆಯಂತೆ ಸದ್ಯ ತಮಿಳುನಾಡಿಗೆ ನೀರುವ ಬಿಡುವ ವಿಚಾರವನ್ನು ಸಿಎಂ ಮುಂದೂಡಿದ್ದಾರೆ. ಆದ್ರೆ ಮುಂದೇನಾಗುತ್ತೆ ಅನ್ನೋದೇ ಕುತೂಹಲ.
ಬ್ಯೂರೋ ರಿಪೋರ್ಟ್ ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.