ಜಡ್ಜ್‌ ಹೇಗಿರಬೇಕು ಎನ್ನುವುದಕ್ಕೆ ರಮೇಶ್‌ಕುಮಾರ್ ಹೇಳಿದ್ದೇನು ಗೊತ್ತಾ?

Published : Sep 23, 2016, 03:41 PM ISTUpdated : Apr 11, 2018, 12:53 PM IST
ಜಡ್ಜ್‌ ಹೇಗಿರಬೇಕು ಎನ್ನುವುದಕ್ಕೆ  ರಮೇಶ್‌ಕುಮಾರ್ ಹೇಳಿದ್ದೇನು ಗೊತ್ತಾ?

ಸಾರಾಂಶ

ಬೆಂಗಳೂರು (ಸೆ.23):  ‘‘ಗ್ರೇಟ್‌ ಬ್ರಿಟನ್‌ನಲ್ಲಿ ಪ್ರಸಿದ್ಧ ಮುಖ್ಯ ನ್ಯಾಯಾಧೀಶ ಮ್ಯಾಕ್ಸ್‌ ಮಿಲನ್‌ ಅಂತ ಒಬ್ಬರಿದ್ದರು. ಅವರನ್ನೊಮ್ಮೆ ಸಂದರ್ಶನದಲ್ಲಿ ಪತ್ರಕರ್ತ ಕೇಳಿದರು. ನಿಮ್ಮ ಪ್ರಕಾರ ಒಳ್ಳೆಯ ಜಡ್ಜ್‌ ಹೇಗಿರಬೇಕು? ಎಂದರು. ಆಗ ಮಿಲನ್‌, ‘‘ಸ್ವಲ್ಪ ಜ್ಞಾನ ಇರಬೇಕು, ಹೆಚ್ಚು ಗುಣವಂತ ಆಗಿರಬೇಕು’’ ಎಂದರು.

ಹೀಗೆಂದು ಸದನದಲ್ಲಿ ನೆನಪಿಸಿಕೊಂಡರು ಆರೋಗ್ಯ ಸಚಿವ ರಮೇಶ್‌ಕುಮಾರ್‌. ‘‘ಜಡ್ಜ್‌ ಶುಡ್‌ ಬಿ ಜಂಟಲ್‌ಮನ್‌, ಶುಡ್‌ ನೋ ಬಿಟ್‌ ಆಫ್‌ ಲಾ’’ ಎಂಬ ಮಿಲನ್‌ ಮಾತು ನೆನಪಿಸಿದ ಅವರು, ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಬಗ್ಗೆ ಹೇಳುವಾಗ ಸಮಯೋಚಿತವಾಗಿ ಸ್ಮರಿಸಿದರು.

ಶೆಟ್ಟರ್‌ ಮಾತನಾಡುತ್ತಿರುವಾಗಲೇ ಮತ್ತೊಂದು ಸಂದರ್ಭದಲ್ಲಿ ‘‘ಶೆಟ್ಟರೆ, ತುಂಬಾ ದೀರ್ಘ ಚರ್ಚೆಗೆ ಹೋಗಬೇಡಿ. ಬೌಲರ್‌ ಬೌಲ್‌ ಮಾಡಿಯಾಗಿದೆ, ಬ್ಯಾಟ್ಸ್‌ಮನ್‌ ಔಟ್‌ ಕೂಡ ಆಗಿದ್ದಾನೆ. ಆದರೆ ಅಂಪೈರ್‌ ನೋ ಬಾಲ್‌ ಎಂದಿದ್ದಾನೆ. ಹೀಗಾಗಿ ಹೆಚ್ಚು ಚರ್ಚೆ ಅಗತ್ಯ ಇಲ್ಲ ಎನಿಸುತ್ತೆ’’ ಎಂದಾಗ ಸಭೆಯಲ್ಲಿ ನಗೆ ತೇಲಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ