ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು..?

By Web DeskFirst Published May 27, 2019, 8:48 AM IST
Highlights

ಬೆಂಗಳೂರು ಗ್ರಾಮಂತರ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪಿದ್ದು ಇದಕ್ಕೆ ಕಾರಣವೇನು ಎಂದು ಹೇಳಿದ್ದಾರೆ.

ರಾಮ​ನ​ಗರ :  ಬೆಂಗ​ಳೂರು ಗ್ರಾಮಾಂತರ ಲೋಕ​ಸಭಾ ಕ್ಷೇತ್ರ​ದಲ್ಲಿ ಅಭ್ಯರ್ಥಿಯ ಆಯ್ಕೆ ಹಾಗೂ ವ್ಯವ​ಸ್ಥಿ​ತ​ವಾಗಿ ಚುನಾ​ವ​ಣಾ ಪ್ರಚಾರ ನಡೆ​ಸು​ವಲ್ಲಿ ವಿಫ​ಲ​ವಾ​ಗಿದ್ದೆ ಚುನಾ​ವ​ಣೆ​ಯಲ್ಲಿ ಸೋಲು ಅನು​ಭ​ವಿ​ಸಲು ಕಾರಣ ಎಂದು ಪರಾ​ಜಿತ ಬಿಜೆ​ಪಿ ಅಭ್ಯರ್ಥಿ ಅಶ್ವಥ್‌ ನಾರಾ​ಯ​ಣ​ಗೌಡ ತಿಳಿ​ಸಿ​ದರು.

ಭಾನು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮೂರು ನಾಲ್ಕು ತಿಂಗಳ ಮುಂಚೆಯೇ ಬಿಜೆಪಿ ಅಭ್ಯರ್ಥಿ ಘೋಷ​ಣೆ​ಯಾ​ಗಿ​ದ್ದರೆ ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ ಸೇರಿ​ದಂತೆ ಕರ್ನಾ​ಟ​ಕ​ ಕಾಂಗ್ರೆಸ್‌ ಮುಕ್ತ ಆಗು​ತ್ತಿತ್ತು. ಇದು ಪಕ್ಷದ ವರಿ​ಷ್ಠ​ರ ಅರಿ​ವಿಗೂ ಬಂದಿದೆ. ಮಾಜಿ ಸಚಿವ ಯೋಗೇ​ಶ್ವರ್‌ ಅಭ್ಯ​ರ್ಥಿ​ಯಾ​ಗಿ​ದ್ದರೆ ಸುಲ​ಭ​ವಾಗಿ ಸಂಸ​ದ​ರಾ​ಗುವ ಅವ​ಕಾಶ ಸಿಗು​ತ್ತಿತ್ತು. ಅವರು ನಿರಾ​ಕ​ರಿ​ಸಿದ ಹಿನ್ನೆ​ಲೆ​ಯಲ್ಲಿ ಆಕ​ಸ್ಮಿ​ಕ​ವಾಗಿ ನಾನು ಅಭ್ಯ​ರ್ಥಿ​ಯಾದೆ. ಚುನಾ​ವ​ಣೆ​ಯಲ್ಲಿ ಯಾರೇ ಹೊಂದಾ​ಣಿಕೆ, ಒಳ​ಒ​ಪ್ಪಂದ ಮಾಡಿ​ಕೊಂಡರೂ ಮತ​ದಾರ ಮತ್ತು ಪಕ್ಷದ ಕಾರ್ಯ​ಕ​ರ್ತರು ಅದನ್ನು ಒಪ್ಪು​ವು​ದಿ​ಲ್ಲ ಎಂದು ಹೇಳಿ​ದ​ರು.

ನಾನು ಬೆಂಗ​ಳೂರು ಉತ್ತರ ಕ್ಷೇತ್ರ​ ಚುನಾ​ವ​ಣೆಯ ಜವಾ​ಬ್ದಾರಿ ಹೊತ್ತುಕೊಂಡಿದ್ದೆ. ನಾಮ​ಪತ್ರ ಸಲ್ಲಿ​ಕೆಗೆ ಒಂದು ದಿನ ಇರು​ವಂತೆ ನನ್ನನ್ನು ಅಭ್ಯ​ರ್ಥಿ​ಯ​ನ್ನಾಗಿ ಆಯ್ಕೆ ಮಾಡಿ​ದರು. ತರಾ​ತು​ರಿ​ಯ​ಲ್ಲಿಯೇ ನಾನು ನಾಮ​ಪತ್ರ ಸಲ್ಲಿ​ಸಿದೆ. ಚುನಾ​ವ​ಣೆಗೆ ಬಾಕಿ ಉಳಿ​ದಿದ್ದ ಕೇವಲ 22 ದಿನ​ಗ​ಳಲ್ಲಿ ಮತ​ದಾ​ರ​ರನ್ನು ಭೇಟಿ​ಯಾ​ಗಲು ಹಾಗೂ ಕಾರ್ಯ​ಕ​ರ್ತರ ಸಭೆಗಳನ್ನು ನಡೆ​ಸಲು ಸಾಧ್ಯ​ವಾ​ಗ​ಲಿಲ್ಲ ಎಂದರು.

click me!