ಸಿಎಂ ಎಚ್‌ಡಿಕೆ ಮುಂದಿನ ಹಾದಿ ಏನು?

By Web DeskFirst Published Jul 16, 2019, 7:35 AM IST
Highlights

ರಾಜ್ಯ ರಾಜಕೀಯದಲ್ಲಿ ಡ್ರಾಮಾ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಭವಿಷ್ಯ  ನಿರ್ಧಾರವಾಗಲಿದ್ದು, ಹಾಗಾದರೆ ಎಚ್ ಡಿಕೆ ಮುಂದಿನ ನಡೆ ಏನು..?

ರಾಜ್ಯ ರಾಜಕೀಯದಲ್ಲಿ ಡ್ರಾಮಾ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಭವಿಷ್ಯ  ನಿರ್ಧಾರವಾಗಲಿದ್ದು, ಹಾಗಾದರೆ ಎಚ್ ಡಿಕೆ ಮುಂದಿನ ನಡೆ ಏನು.

1. ಇನ್ನೂ ಎರಡು ದಿನ ಅವಕಾಶ ಇರುವುದರಿಂದ ಮಂಗಳವಾರದ ಸುಪ್ರೀಂಕೋರ್ಟ್‌ನ ನಡೆ ಆಧರಿಸಿ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮನವೊಲಿಸಲು ಅಂತಿಮ ಹಂತದ ಎಲ್ಲ ಪ್ರಯತ್ನ ನಡೆಸಲು ಮುಂದಾಗುವ ಸಾಧ್ಯತೆಯಿದೆ.

2. ಈ ಎರಡು ದಿನಗಳೊಳಗಾಗಿ ತಾವೇ ಮುಂಬೈಗೆ ತೆರಳಿ ಅತೃಪ್ತ ಶಾಸಕರನ್ನು ಭೇಟಿ ಮಾಡುವ ಪ್ರಯತ್ನ ನಡೆಸಬಹುದು. ಆ ಮೂಲಕ ಶಾಸಕರಿಗೆ ಮಣಿದು ಅವರ ಬೇಡಿಕೆಗಳನ್ನು ಈಡೇರಿಸಲು ತಾವು ಎಲ್ಲ ಪ್ರಯತ್ನಗಳನ್ನು ನಡೆಸಿದ್ದಾಗಿ ಜನರ ಅನುಕಂಪ ಗಿಟ್ಟಿಸಲು ತಂತ್ರ ರೂಪಿಸಬಹುದು.

3. ತಮ್ಮ ಸರ್ಕಾರ ಉರುಳಿಸಲು ಪ್ರತಿಪಕ್ಷ ಬಿಜೆಪಿಯು ಅತೃಪ್ತ ಶಾಸಕರನ್ನು ಬಳಸಿಕೊಂಡು ಪ್ರಯತ್ನ ನಡೆಸಿದೆ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಕುಮಾರಸ್ವಾಮಿ ಮುಂದಾಗಬಹುದು.

4. ಎಲ್ಲ ಅಸ್ತ್ರಗಳೂ ವಿಫಲವಾದ ಬಳಿಕ ಅಂತಿಮವಾಗಿ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿ ವಿದಾಯ ಭಾಷಣ ಮಾಡುವ ಮೂಲಕ ಜನರ ಒಲವು ಗಳಿಸಲು ಪ್ರಯತ್ನಿಸಬಹುದು. ಜೊತೆಗೆ ಆ ಭಾಷಣದಲ್ಲಿ ತಾವು ಕಳೆದ ಒಂದೂ ಕಾಲು ವರ್ಷಗಳಲ್ಲಿ ಅನುಭವಿಸಿದ ಯಾತನೆಗಳನ್ನು ಬಿಚ್ಚಿಡಬಹುದು.

5. ಶಾಸಕರ ಸಂಖ್ಯಾಬಲ ಗಳಿಸಲು ಸಾಧ್ಯವಾಗದಿದ್ದಲ್ಲಿ ಪ್ರತಿಪಕ್ಷ ಹಾಗೂ ಇತರ ನಾಯಕರ ಮಾತುಗಳಿಗೆ ಅವಕಾಶ ನೀಡದೆ ತಮ್ಮ ಭಾಷಣ ಮುಗಿಸಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಬಹುದು.

click me!