(ವಿಡಿಯೋ)BBCಗೆ ಲೈವ್ ಸಂದರ್ಶನ ನೀಡುತ್ತಿದ್ದ ಪ್ರೊಫೆಸರ್ ಕೋಣೆಯೊಳಗೆ ನಡೆಯಿತು ಅಚಾತುರ್ಯ...!

By Suvarna Web DeskFirst Published Mar 14, 2017, 9:39 AM IST
Highlights

ರವಿವಾರ ರಜಾ ದಿನ, ಹೀಗಿರುವಾಗ ನಿಮಗೆ ಬಾಸ್ ಕರೆ ಬಂದು ಯಾವುದಾದರೊಂದು ಬಹು ಮುಖ್ಯವಾದ ವಿಚಾರದ ಕುರಿತು ಚರ್ಚೆ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ನಿಮ್ಮ ಮಕ್ಕಳು ನೀವಿದ್ದ ಸ್ಥಳಕ್ಕೆ ಬಂದು ನಿಮ್ಮ ಮಾತುಕತೆಯೇ ನಿಂತುಹೋಗುವಂತ ಸನ್ನಿವೇಶ ಹುಟ್ಟಿಸಿದರೆ? ಇಂತಹುದೇ ಪರಿಸ್ಥಿತಿ ಹಲವರು ಎದುರಿಸಿರುತ್ತಾರೆ. ಸದ್ಯ ಬಿಬಿಸಿ ಚಾನೆಲ್'ಗೆ ಲೈವ್ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯೂ ಇಂತಹುದೇ ಸಂದರ್ಭವನ್ನು ಎದುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲಾಥಾಣಗಳಲ್ಲಿ ವೈರಲ್ ಆಗುತ್ತಿದೆ.

ನವದೆಹಲಿ(ಮಾ.14): ರವಿವಾರ ರಜಾ ದಿನ, ಹೀಗಿರುವಾಗ ನಿಮಗೆ ಬಾಸ್ ಕರೆ ಬಂದು ಯಾವುದಾದರೊಂದು ಬಹು ಮುಖ್ಯವಾದ ವಿಚಾರದ ಕುರಿತು ಚರ್ಚೆ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ನಿಮ್ಮ ಮಕ್ಕಳು ನೀವಿದ್ದ ಸ್ಥಳಕ್ಕೆ ಬಂದು ನಿಮ್ಮ ಮಾತುಕತೆಯೇ ನಿಂತುಹೋಗುವಂತ ಸನ್ನಿವೇಶ ಹುಟ್ಟಿಸಿದರೆ? ಇಂತಹುದೇ ಪರಿಸ್ಥಿತಿ ಹಲವರು ಎದುರಿಸಿರುತ್ತಾರೆ. ಸದ್ಯ ಬಿಬಿಸಿ ಚಾನೆಲ್'ಗೆ ಲೈವ್ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯೂ ಇಂತಹುದೇ ಸಂದರ್ಭವನ್ನು ಎದುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲಾಥಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಬರ್ಟ್ ಕೈಲಿ ಓರ್ವ ಪ್ರಸಿದ್ಧ ಪ್ರೊಫೆಸರ್ ಹಾಗೂ ಅಂತರಾಷ್ಟ್ರೀಯ ವಿಚಾರಗಳ ವಿಶ್ಲೇಷಕರು. BBC ಇವರೊಂದಿಗೆ ಸುದ್ದಿ ಪ್ರಸಾರವಾಗುತ್ತಿದ್ದ ವೇಳೆ ವಿಡಿಯೋ ಕಾಲ್ ಲೈವ್ ಸಂದರ್ಶನವೊಂದನ್ನು ಆಯೋಜಿಸಿ ದಕ್ಷಿಣ ಕೊರಿಯಾದ ವಿಷಯವಾಗಿ ಚರ್ಚೆ ನಡೆಸುತ್ತಿತ್ತು. ಈ ಮಧ್ಯೆ ಪ್ರೊಫೆಸರ್ ಕುಳಿತಿದ್ದ ಕೋಣೆಯ ಬಾಗಿಲು ಅಚಾನಕ್ಕಾಗಿ ತೆರೆದಿದ್ದು, ಅವರ ಹಿರಿಯ ಪುತ್ರಿ ಒಳ ಪ್ರವೇಶಿಸುತ್ತಾಳೆ. ಇದಾದ ಕೆಲವೇ ಕ್ಷಣಗಳಲ್ಲಿ ಇವರ ಮತ್ತೊಬ್ಬ ಮಗು ವಾಕರ್ ಮೂಲಕ ಒಳ ಪ್ರವೇಶಿಸುತ್ತಾನೆ. ಇಷ್ಟೆಲ್ಲಾ ನಡೆಯುತ್ತಿದ್ದಂಯೇ ರಭಸವಾಗಿ ಇವರ ಪತ್ನಿಯೂ ಆಗಮಿಸಿ ಮಕ್ಕಳನ್ನು ಹೊರಗೊಯ್ಯುತ್ತಾಳೆ.

ಇಲ್ಲಿ ನಡೆದ ಕುತೂಹಲಕಾರಿ ಹಾಗೂ ಗಮನಿಸಲೇಬೇಕಾದ ವಿಚಾರವೆಂದರೆ ಪ್ರೊಫೆಸರ್ ಸಾಹೇಬರ ತಾಳ್ಮೆ. ಬೇರೆ ಯಾರಾದರೂ ಆಗಿದ್ದರೆ ಮಕ್ಕಳ ಮೇಲೆ ಗದರುತ್ತಿದ್ದರು. ಆದರೆ ಪ್ರೊಫೆಸರ್ ಮಾತ್ರ ತಾಳ್ಮೆಂವಹಿಸಿದ್ದಾರೆ ಅಲ್ಲದೇ ವಿನಯವಂತರಾಗಿ ಆ್ಯಂಕರ್ ಬಳಿ ಕ್ಷಮೆ ಯಾಚಿಸಿದ್ದಾರೆ.

click me!