ವೈದ್ಯರ ಪ್ರತಿಭಟನೆಯಲ್ಲಿ ದೀದಿ ಸಂಬಂಧಿ: ಏನು ಸಂದೇಶ?

By Web DeskFirst Published Jun 14, 2019, 9:43 PM IST
Highlights

ಪ.ಬಂಗಾಳದಲ್ಲಿ ತೀವ್ರಗೊಂಡ ವೈದ್ಯರ ಪ್ರತಿಭಟನೆ| ಸರ್ಕಾದ ಧೋರಣೆ ಖಂಡಿಸಿ 300 ವೈದ್ಯರ ರಾಜೀನಾಮೆ| ವೈದ್ಯರ ಮುಷ್ಕರದಲ್ಲಿ ಮಮತಾ ಬ್ಯಾನರ್ಜಿ  ಸಂಬಂಧಿ ಭಾಗಿ| ಮುಷ್ಕರಕ್ಕೆ ಬೆಂಬಲ ಸೂಚಿಸಿದ ಸಿಎಂ ಸಂಬಂಧಿ ಅಬೇಶ್ ಬ್ಯಾನರ್ಜಿ|

ಕೋಲ್ಕತ್ತಾ(ಜೂ.14): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ.ಬಂಗಾಳದಲ್ಲಿ ಸರ್ಕಾರಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ತಮ್ಮ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಇದುವರೆಗೂ ಸುಮಾರು 300 ವೈದ್ಯರು ರಾಜೀನಾಮೆ ನೀಡಿದ್ದು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

ಈ ಮಧ್ಯೆ ವೈದ್ಯರ ಪ್ರತಿಭಟನೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಕೂಡ ಭಾಗಿಯಾಗಿದ್ದು, ಸರ್ಕಾರಿ ವೈದ್ಯರ ಕುರಿತಾದ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮಮತಾ ಸಂಬಂಧಿ ಅಬೇಶ್ ಬ್ಯಾನರ್ಜಿ ಇಲ್ಲಿನ ಕೆಪಿಸಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಧ್ಯಕ್ಷರಾಗಿದ್ದು, ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

click me!