ಬೆಂಕಿಯುಂಡೆಯಾಯ್ತಾ ಕುವೈತ್?: 63 ಡಿಗ್ರಿ ಸೆಲ್ಸಿಯಸ್ ಅಂತೆ!

By Web DeskFirst Published Jun 14, 2019, 7:35 PM IST
Highlights

ಭಾರತಕ್ಕೆ ಅಕ್ಷರಶಃ ಯಮ ಸ್ವರೂಪಿಯಾಗಿರುವ ಬಿಸಿಲು| ಬೆಂಕಿಯುಂಡೆಯಂತೆ ಕುದಿಯುತ್ತಿರುವ ಕುವೈತ್| ಕುವೈತ್​​ನಲ್ಲಿ 63 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು| ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಅಂದಾಜು| 116 ವರ್ಷ ಹಳೆಯ ದಾಖಲೆ ಮುರಿದ ಕುವೈತ್| ಕುವೈತ್​​ನಲ್ಲಿ ನಿಜಕ್ಕೂ ಎಷ್ಟು ಟಿಗ್ರಿ ತಾಪಮಾನ ಇದೆ?|

ಕುವೈತ್(ಜೂ.14)​: ಈ ಬಾರಿಯ ಬೇಸಿಗೆ ಭಾರತಕ್ಕೆ ಅಕ್ಷರಶಃ ಯಮ ಸ್ವರೂಪಿಯಾಗಿದೆ. ರಾಜಸ್ಥಾನದ ಚುರುವಿನಲ್ಲಿ ದೇಶದಲ್ಲೇ ಗರಿಷ್ಠ(50.8ಡಿಗ್ರೀ ಸೆಲ್ಸಿಯಸ್) ತಾಪಮಾನ ದಾಖಲಾಗುವ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಆದರೆ ಭಾರತೀಯರಿಗೆ ಕೊಂಚ ಸಮಾಧಾನ ತರುವ ಸುದ್ದಿಯೊಂದು ದೂರದ ಕುವೈತ್'ದಿಂದ ಬಂದಿದೆ. ಭಾರತವೇ ಬೆಂಕಿಯುಂಡೆ ಎಂದುಕೊಂಡವರಿಗೆ ಕುವೈತ್ ಅದಕ್ಕಿಂತಲೂ ಹೆಚ್ಚು ಕುದಿಯುತ್ತಿದೆ ಎಂಬ ಸುದ್ದಿ ಆಘಾತ ತಂದಿದೆ.

ಹೌದು, ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್​​ನಲ್ಲಿ ಕಳೆದ ಜೂನ್​​ 8ರಂದು ಬರೋಬ್ಬರಿ 63 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಕುವೈತ್​​ನಲ್ಲಿ ದಾಖಲಾಗಿರುವ ಈ ತಾಪಮಾನ ವಿಶ್ವದಲ್ಲೇ ಗರಿಷ್ಠ ಎನ್ನಲಾಗಿದ್ದು, ಸೌದಿ ಅರೇಬಿಯಾದಲ್ಲಿ 55 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ. 

ಸದ್ಯ ಕುವೈತ್​​ನಲ್ಲಿ 63 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ 116 ವರ್ಷ ಹಳೆಯ ದಾಖಲೆ ಪತನವಾಗಿದ್ದು, 1913ರ ಜುಲೈ 10ರಂದು ಕ್ಯಾಲಿಫೋರ್ನಿಯಾದ ಫರ್ನೇಸ್ ಕ್ರೀಕ್ ರಾಂಚ್​​ನಲ್ಲಿ 56.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದುವರೆಗಿನ ಗರಿಷ್ಠ ಎನ್ನಲಾಗಿತ್ತು.

ಆದರೆ ಕೆಲವು ಮೂಲಗಳ ಪ್ರಕಾರ ಕುವೈತ್​​ನಲ್ಲಿ ಇಷ್ಟೊಂದು ಪ್ರಮಾಣದ ತಾಪಮಾನ ಇಲ್ಲ ಎನ್ನಲಾಗಿದ್ದು, 54.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಅಂದಾಜಿಸಲಾಗಿದೆ.

click me!