ಪಶ್ಚಿಮ ಬಂಗಾಳ ಘೋರ...ಮರದಲ್ಲಿ ಬಿಜೆಪಿ ಕಾರ್ಯಕರ್ತನ ಶರೀರ

By Web DeskFirst Published Jun 11, 2019, 6:51 PM IST
Highlights

ಲೋಕಸಭಾ ಚುನಾವಣೆ ಮುಗಿದಿದ್ದರೂ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರದ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಘರ್ಷಣೆಯಲ್ಲಿ ಅದೆಷ್ಟೋ ಜೀವಗಳು ಬಲಿಯಾಗುತ್ತಲೇ ಇವೆ.

ಕೋಲ್ಕತ್ತಾ[ಜೂ. 11]  ನಿಜಕ್ಕೂ ಈ ಘಟನೆ ಮಾತ್ರ ಎಲ್ಲರನ್ನು ಬೆಚ್ಚಿಬೀಳಿಸಿದೆ. ಬಿಜೆಪಿ ಕಾರ್ಯಕರ್ತ ಸಮ್ ತುಲ್  ದೋಲಿ ಅವರ ಶವ ಸಾರ್ ಪೋತಾ ಹಳ್ಳಿಯ ಬಳಿಯ ಮರದಲ್ಲಿ ನೇತಾಡುತ್ತಿರುವುದು ಪತ್ತೆಯಾಗಿದೆ. ಬಿಜೆಪಿ  ಮತ್ತು ಟಿಎಂಸಿ ನಡುವೆ ಜೈ ಶ್ರೀರಾಮ್ ಘೋಷಣೆ ನಂತರ ಪರಿಸ್ಥಿತಿ ಬಿಗಡಾಯಿಸಿದೆ.

ದುಷ್ಕರ್ಮಿಗಳಿಂದ ಹತ್ಯೆಯಾದ ಕಾರ್ಯಕರ್ತನ  ದೇಹವನ್ನು ಪೋಸ್ಟ್ ಮಾರ್ಟ್ಂ ಗೆ ಕಳಿಸಲು ಪೊಲೀಸರು ಮುಂದಾದಾಗ ಪ್ರತಿಭಟನೆ ಎದುರಿಸಬೇಕಾಗಿ ಬಂದಿತು.

ಬಂಗಾಳದಲ್ಲಿ ‘ಜೈ ಮಹಾ ಕಾಳಿ, ಜೈ ಶ್ರೀರಾಮ್’ ಬಿಜೆಪಿ ಸ್ಲೋಗನ್!

ಪಶ್ಚಿಮ ಬಂಗಾಳದಲ್ಲಿನ ವಾಸ್ತವಿಕ ಸ್ಥತಿ ವರದಿ ಮಾಡಲು ಕೇಂದ್ರ ಸರಕಾರ ತಿಳಿಸಿದ್ದರು ತೃಣಮೂಲ ಕಾಂಗ್ರೆಸ್ ನೇತೃತ್ವದ ಮಮತಾ ಬ್ಯಾನರ್ಜಿ ಸರಕಾರ ಮಾತ್ರ ವರದಿ ನೀಡುವ ಗೋಜಿಗೆ ಹೋಗಿಲ್ಲ.  ಬಿಜೆಪಿ ಮತ್ತು ಟಿಎಂಸಿ ಪರಸ್ಪರ ಆರೋಪ -ಪ್ರತ್ಯಾರೋಪದಲ್ಲೇ ಕಾಲ ಕಳೆಯುತ್ತಿವೆ.

click me!