ಪ್ರಿಯಾಂಕ ಖರ್ಗೆ ಕಟೌಟ್ ತೆಗೆಯಲು ಹೋಗಿ ಯುವಕ ಸಾವು

Published : Jun 30, 2018, 03:55 PM IST
ಪ್ರಿಯಾಂಕ ಖರ್ಗೆ ಕಟೌಟ್  ತೆಗೆಯಲು ಹೋಗಿ ಯುವಕ ಸಾವು

ಸಾರಾಂಶ

ಸಚಿವರ ಸ್ವಾಗತದ ವಿಚಾರ ಯುವಕನೊಬ್ಬನ ಪ್ರಾಣ ಬಲಿ ಪಡೆದಿದೆ. ಸಚಿವ ಪ್ರಿಯಾಂಕ ಖರ್ಗೆ ಕಟೌಟ್ ತೆಗೆಯಲು ಹೋದ ಯುವಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

ಕಲಬುರಗಿ[ಜೂ.30] ಸಚಿವರ ಸ್ವಾಗತಕ್ಕೆ ಕಟ್ಟಿದ್ದ ಬ್ಯಾನರ್ ತೆರವು ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸ್ವಾಗತಕ್ಕೆ ಹಾಕಿದ್ದ ಬ್ಯಾನರ್ ತೆರವು ಮಾಡುವ ವೇಳೆ ಅವಘಡ ಸಂಭವಿಸಿದೆ.

ಕಲಬುರಗಿ ಹೊರವಲಯದ ಹುಮನಾಬಾದ್  ರಸ್ತೆ ಬದಿ ಬಿದ್ದಿದ್ದ ಪ್ರಿಯಾಂಕ ಖರ್ಗೆ ಭಾವಚಿತ್ರವುಳ್ಳ ಬ್ಯಾನರ್ ಕಟೌಟ್ ತೆಗೆಯುವಾಗ ಯುವಕನಿಗೆ ವಿದ್ಯುತ್ ಶಾಕ್ ತಗುಲಿದೆ. ಶನಿವಾರ ಬೆಳಗಿನ ಜಾವವೇ ಅವಘಡ ಸಂಭವಿಸಿದೆ. ಇದಾದ ಮೇಲೆ ಯುವಕನ ಸಂಬಂಧಿಕರು ಮತ್ತು ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಧಾವಿಸಿದ ಪೊಲೀಶರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಉಪಕಾರದಿಂದಲೇ ಗೆದ್ದು ಮತ್ತೆ ಸಿಎಂ ಆಗಲು ಸಾಧ್ಯವಾಯ್ತು: ಸಿದ್ದರಾಮಯ್ಯ
ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣ, ಜಾಡು ಹಿಡಿದು ಬೆಂಗಳೂರು ಬಳ್ಳಾರಿ ಸೇರಿ ಹಲವೆಡೆ ಇಡಿ ದಾಳಿ