
ಕಲಬುರುಗಿ(ಜೂ.30): ಲವ್ ಜಿಹಾದ್ ಕೇಸ್ ನಲ್ಲಿ ಕಲುಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಇರ್ಷಾದ್ ಉಲ್ಲಾ ಖಾನ್ ಕುಟುಂಬ ಭಾಗಿಯಾಗಿರುವ ಸ್ಫೋಟಕ ಮಾಹಿತಿ ಎನ್‌ಐಎ ತನಿಖೆಯಿಂದ ಬಹಿರಂಗವಾಗಿದೆ.
ಕೇರಳ ಮೂಲದ ಹಿಂದೂ ಯುವತಿಯೋರ್ವಳನ್ನು ಬೆಂಗಳೂರಿನ ಉದ್ಯಮಿಯೋರ್ವರ ಮಗ ಪ್ರೀತಿಸುವ ನಾಟಕವಾಡಿ ಇಸ್ಲಾಂ ಧಮರ್ಮಕ್ಕೆ ಮತಾತಂತರ ಮಾಡಿದ್ದ. ನಂತರ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಡಿಸಿ ಇರ್ಷಾದ್ ಉಲ್ಲಾ ಖಾನ್ ಅವರ ಮನೆಯಲ್ಲಿ ಇರಿಸಿದ್ದ ಎನ್ನಲಾಗಿದೆ.
ಈ ಕುರಿತು ಕಳೆದ ಜನವರಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ, ಇರ್ಷಾದ್ ಉಲ್ಲಾ ಖಾನ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಹಲವು ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ. ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲು ಬಂದಿದ್ದ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಇಸ್ಲಾಂ ಧರ್ಮಕ್ಕೆ ಮತಾತಂತರ ಮಾಡಲಾಗಿತ್ತು. ಆದರೆ ಬೆಂಗಳೂರಿನ ಉದ್ಯಮಿಯ ಮಗ ನಜೀರ್ ಖಾನ್ ಆಕೆಯ ಮೇಲೆ ಅತ್ಯಾಚಾರ ನಡೆಸಿ ಡಿಸಿ ಇರ್ಷಾದ್ ಉಲ್ಲಾ ಖಾನ್ ಮೆನೆಯಲ್ಲಿ ಇರಿಸಿದ್ದ. ಸುಮಾರು ೧೫ ದಿನಗಳ ಕಾಲ ಇರ್ಷಾದ್ ಉಲ್ಲಾ ಖಾನ್ ಮನೆಯಲ್ಲೇ ಇದ್ದ ಯುವತಿಯನ್ನು ನಂತರ ಸೌದಿಗೆ ಕರೆದುಕೊಂಡು ಹೋಗಲಾಗಿತ್ತು.
ಸೌದಿಯಲ್ಲೂ ಈ ಯುವತಿ ಮೇಲೆ ಅಲ್ಲಿನ ಶೇಖ್ ಗಳು ನಿರಂತರ ಅತ್ಯಾಚಾರ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದ್ದು, ಇಡೀ ಪ್ರಕರಣದಲ್ಲಿ ಆರೋಪಿ ನಜೀರ್ ಖಾನ್ ಗೆ ಡಿಸಿ ಇರ್ಷಾದ್ ಉಲ್ಲಾ ಖಾನ್ ಪತ್ನಿ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲದೇ ಇರ್ಷಾದ್ ಉಲ್ಲಾ ಖಾನ್ ಪತ್ನಿ ಹಿಂದೂ ಯುವತಿಯ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿ ಯುವತಿಯರನ್ನು ಇಸ್ಲಾಂ ಧಮರ್ಮಕ್ಕೆ ಮತಾಂತರ ಮಾಡುತ್ತಿದ್ದರು ಎಂಬ ಗುಮಾನಿ ಇದೆ. ಸೌದಿಯಿಂದ ಬೆಂಗಳೂರಿಗೆ ಮರಳುತ್ತಿದ್ದ ನಜೀರ್ ಖಾನ್ ನನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದ ಎನ್ ಐಎ ತಂಡಕ್ಕೆ ಇರ್ಷಾದ್ ಉಲ್ಲಾ ಖಾನ್ ಪತ್ನಿಯ ಅಸಲಿ ಮುಖ ಗೊತ್ತಾಗಿದೆ.
ವಿಚಾರಣೆ ವೇಳೆ ಸಂತ್ರಸ್ತ ಯುವತಿ ನೀಡಿದ ಮಾಹಿತಿ ಮೇರೆಗೆ ಎನ್ ಐಎ ಬೆಂಗಳೂರಿನ ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ಇರ್ಷಾದ್ ಉಲ್ಲಾ ಖಾನ್ ಪತ್ನಿ ಲವ್ ಜಿಹಾದ್ ಬೆಂಬಲಿಸುತ್ತಿದ್ದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಡಿಸಿ ಇರ್ಷಾದ್ ಉಲ್ಲಾ ಖಾನ್ ಪತ್ನಿಯಿಂದ 8 ಲ್ಯಾಫ್ ಟಾಪ್ 12 ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಎನ್ ಐಎ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.