ವೀಕೆಂಡ್ ವಿತ್ ವಿವಾದ ಹಾಗೂ ಮುಖ್ಯಸ್ಥ ಹುಣುಸೂರು ಸ್ಪಷ್ಟನೆ

Published : May 09, 2017, 06:09 AM ISTUpdated : Apr 11, 2018, 12:52 PM IST
ವೀಕೆಂಡ್ ವಿತ್ ವಿವಾದ  ಹಾಗೂ ಮುಖ್ಯಸ್ಥ  ಹುಣುಸೂರು ಸ್ಪಷ್ಟನೆ

ಸಾರಾಂಶ

ನಿಮ್ಮಂತೆ ನಮ್ಮಲ್ಲೂ ಚಿತ್ರರಂಗಕ್ಕೆ ಹೊರತಾದ ಸಾಧಕರ ದೊಡ್ಡ ಪಟ್ಟಿಯೇ ಇದೆ, ಆದರೆ ಅವರನ್ನು ಸಾಧಕರ ಸೀಟಿನಲ್ಲಿ ಕೂರಿಸುವುದು ಅಂದುಕೊಂಡಷ್ಟುಸುಲಭವಲ್ಲ'

ಝಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ವೀಕೆಂಡ್‌ ವಿತ್‌ ರಮೇಶ್‌' ಕಾರ್ಯಕ್ರಮಕ್ಕೆ ಕೇವಲ ಸಿನಿಮಾ ಕ್ಷೇತ್ರದವರನ್ನೇ ಕರೆಸುತ್ತಾರೆ ಮತ್ತು ಕೆಲ ವರ್ಷಗಳ ಸಾಧನೆ ಮಾಡಿದವರನ್ನಷ್ಟೇ ಕರೆಯುತ್ತಾರೆ ಎನ್ನುವ ವಿಚಾರವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಸಾಧಕರ ಸೀಟಿಗೆ ಅತಿಥಿಗಳನ್ನಾಗಿ ನಿರ್ದೇಶಕ, ನಟ ರಕ್ಷಿತ್‌ ಶೆಟ್ಟಿ, ಅರ್ಜುನ್‌ ಜನ್ಯ, ನಟಿ ಪ್ರಿಯಾಮಣಿ ಮೊದಲಾದವ ರನ್ನು ಕರೆಸಿದ ಹಿನ್ನೆಲೆಯಲ್ಲಿ ಈ ಕೂಗು ಕೇಳತೊಡಗಿತು. ಸಾಧನೆಗೆ ವಯಸ್ಸು, ಅನುಭವ ಮುಖ್ಯ. ತೀರಾ ಚಿಕ್ಕ ವಯಸ್ಸಿನ, ಚಿತ್ರ ರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನಷ್ಟೇ ಕರೆಸಿದರೆ ಆ ವೇದಿಕೆಗೆ ಘನತೆ ಇರುವುದಿಲ್ಲ ಎನ್ನುವುದು ನೆಟಿಜನ್ಸ್‌ಗಳ ವಾದ. ಇದಕ್ಕೆ ಪರ- ವಿರೋದ ಬಣಗಳೂ ಹುಟ್ಟಿಕೊಂಡು ಪರಸ್ಪರ ಚರ್ಚೆಗೆ ತೊಡಗಿ ಅದನ್ನೊಂದು ದೊಡ್ಡ ವಿವಾದವನ್ನಾಗಿಯೇ ಮಾಡ ಲಾಯಿತು. ರಕ್ಷಿತ್‌ ಶೆಟ್ಟಿ, ಅರ್ಜುನ್‌ ಜನ್ಯ, ಪ್ರಿಯಾಮಣಿ ಅವರ ಆಯ್ಕೆಯನ್ನು ಅಣಕ ಮಾಡಿ, ಇನ್ನು ಯಾರನ್ನೆಲ್ಲಾ ಆ ವೇದಿಕೆಗೆ ಕರೆಸಬಹುದೆಂದು ತಮಾಷೆ ಮಾಡಿ, ಟ್ರಾಲ್‌, ಮೇಮ್ಸ್‌ ಗಳನ್ನು ಮಾಡಿ ಶೇರ್‌ ಮಾಡಿದ್ದೂ ಆಗಿದೆ.
ಹಿರಿಯರನ್ನು ಕರೆಸಿ:

ಚಿತ್ರರಂಗ ಎಂದ ತಕ್ಷಣ ಇತ್ತೀಚೆಗಷ್ಟೇ ಸಾಧನೆ ಮಾಡಿ, ಸದ್ಯ ಮಾರುಕಟ್ಟೆಯಲ್ಲಿ ಪ್ರಸಿದ್ಧರಿರುವ ವ್ಯಕ್ತಿಗಳನ್ನೇ ಕರೆಸುತ್ತೀರಾ. ಅದರ ಬದಲಾಗಿ ಚಿತ್ರರಂಗದಲ್ಲಿ ಸಾಕಷ್ಟುಸಾಧನೆ ಮಾಡಿದ, ಚಿತ್ರರಂಗದ ಏಳ್ಗೆಗೆ ದುಡಿದ ಹಲವು ಕಲಾವಿದರು, ತಂತ್ರಜ್ಞರಿದ್ದಾರೆ. ಅವರನ್ನೂ ಕರೆಸಿ ಎನ್ನುವುದು ಹಲವರ ಅಹವಾಲು. ಜಯಂತಿ, ಆರತಿ ಸೇರಿದಂತೆ ಹಲವರನ್ನು ಈ ವೇದಿ ಕೆಗೆ ಕರೆಸಿಲ್ಲ. ತೀರಾ ಹಿರಿಯ ಕಲಾವಿದರನ್ನು ಕಡೆಗಣಿಸಲಾಗಿದೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿರುವವರ ಹುಯಿಲು. ಅದಕ್ಕೆ ಸರಿಯಾಗಿ ಪ್ರಿಯಾಮಣಿಯವರನ್ನು ಕರೆಸಿದ್ದು ಹಲವರ ಕೆಂಗಣ್ಣಿಗೆ ಕಾರಣವಾಯ್ತು.
ಬೇರೆ ಕ್ಷೇತ್ರದವರನ್ನೂ ಕರೆಸಿ:

ಸಾಧನೆ ಎಂದ ತಕ್ಷಣ ಚಿತ್ರರಂಗದವರೇ ಏಕೆ, ರೈತರು, ಸೈನಿಕರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸಾಹಿತಿಗಳು ಇಲ್ಲವೇ ಎನ್ನುವುದು ಮತ್ತೊಂದು ವರ್ಗದ ಪ್ರಶ್ನೆ. ಭೈರಪ್ಪನವರನ್ನು ಆ ವೇದಿಕೆಗೆ ಕರೆಸಬೇಕೆಂದು ಸಂಸದ ಪ್ರತಾಪ್‌ ಸಿಂಹ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿದ್ದೂ ಸಾಕಷ್ಟುಚರ್ಚೆಗೆ ಕಾರಣವಾಯಿತು. ಈ ವಾದವನ್ನು ಪುರಸ್ಕರಿಸಿ, ಸಿನಿಮಾಕ್ಕೆ ಸಂಬಂಧಪಡದ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌, ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣವರ್‌ ಅವರನ್ನು ಕರೆಸಲಾಯಿತು. ಆದರೂ ಬೇರೆ ಕ್ಷೇತ್ರದವರನ್ನು ಕರೆಸಿ ಎನ್ನುವ ಕೂಗು ಶಮನವಾಗಲಿಲ್ಲ.
ನಾವೂ ಪ್ರಯತ್ನಿಸಿದ್ದೇವೆ:

ಈ ಬಗ್ಗೆ ಕೂಗು ಹೆಚ್ಚಾದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಝೀ ಕನ್ನಡದ ಮಖ್ಯಸ್ಥ ರಾಘವೇಂದ್ರ ಹುಣಸೂರು, ‘ನಿಮ್ಮಂತೆ ನಮ್ಮಲ್ಲೂ ಚಿತ್ರರಂಗಕ್ಕೆ ಹೊರತಾದ ಸಾಧಕರ ದೊಡ್ಡ ಪಟ್ಟಿಯೇ ಇದೆ, ಆದರೆ ಅವರನ್ನು ಸಾಧಕರ ಸೀಟಿನಲ್ಲಿ ಕೂರಿಸುವುದು ಅಂದುಕೊಂಡಷ್ಟುಸುಲಭವಲ್ಲ' ಎಂದು ಉತ್ತರಿಸಿದ್ದಾರೆ. ‘ನೀವು ಹೇಳುತ್ತಿರುವಂಥ ವ್ಯಕ್ತಿಗಳನ್ನು ಬಹಳ ಹಿಂದೆಯೇ ಸಂಪರ್ಕಿಸಿದ್ದೆವು. ಆದರೆ ಅವರು ಒಪ್ಪಿಲ್ಲ. ಒಪ್ಪದೇ ಇರುವುದಕ್ಕೆ ಅವರದೇ ಆದ ಕಾರಣಗಳಿವೆ. ಜೊತೆಗೆ ಇದು ಸುಲಭಕ್ಕೆ ಸಾಧ್ಯವಾಗುವಂಥ ಕಾರ್ಯಕ್ರಮವೂ ಅಲ್ಲ' ಎಂದು ಹೇಳಿರುವ ಅವರು, ‘ಈವರೆಗೆ 54 ಸಾಧಕರನ್ನು ಈ ಸ್ಥಾನದಲ್ಲಿ ಕೂರಿಸಿದ್ದೇವೆ. ಪ್ರತಿಯೊಬ್ಬರನ್ನೂ ಕರೆಸುವುದು ದುಸ್ಸಾಹಸದ ಕೆಲಸ. ಇನ್ನು ನಿಮ್ಮ ಇಷ್ಟದ ವ್ಯಕ್ತಿಗಳನ್ನು ಕರೆಸುವ ಪ್ರಯತ್ನ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಒಂದು ಶೋ ಜನಪ್ರಿಯತೆಯನ್ನು ಇದು ತೋರಿಸುತ್ತಲೇ ಜನರ ಆಕ್ಷೇಪಕ್ಕೂ ಕಾರಣವಾಗಿರುವುದು ಸತ್ಯ. 

‘ಸಾಧಕರನ್ನು ಕರೆಸುವ ವಿಚಾರಕ್ಕೆ ನಿಮಗೆ ನಿರಾಶೆಯಾಗಿದ್ದರೆ ಕ್ಷಮಿಸಿ. ಮುಂದೆ ನಿಮ್ಮನ್ನು ನಿರಾಶೆ ಮಾಡುವುದಿಲ್ಲ. ನಿಮ್ಮ ನೆಚ್ಚಿನ ಸಾಧಕರನ್ನೇ ಈ ಸೀಟಿಗೆ ಕರೆಸಲಿದ್ದೇವೆ.'
-ರಾಘವೇಂದ್ರ ಹುಣಸೂರು, ಝಿ ಟೀವಿ ಮುಖ್ಯಸ್ಥ

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!