ಮೂರು ಪೆಗ್, ಒಂದ್ ಕಿಸ್, ಮದುವೆ ಕ್ಯಾನ್ಸಲ್!

Published : Sep 24, 2016, 04:22 AM ISTUpdated : Apr 11, 2018, 12:36 PM IST
ಮೂರು ಪೆಗ್, ಒಂದ್ ಕಿಸ್, ಮದುವೆ ಕ್ಯಾನ್ಸಲ್!

ಸಾರಾಂಶ

ಮೆಕ್ಸಿಕೋ(ಸೆ.24): ಕುಡಿತ ಅತಿಯಾದರೆ ಎಂತಹ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಮೆಕ್ಸಿಕೋದಲ್ಲಿ ಒಂದು ನಿದರ್ಶನ ಘಟನೆ ನಡೆದಿದೆ. ಅತಿಯಾಗಿ ಕುಡಿದು ಮೈಮರೆತ ಯುವತಿಯ ಮದುವೆ ಇದೀಗ ರದ್ದಾಗಿ ಹೋಗಿದೆ.

ಕೆಲವೇ ದಿನಗಳಲ್ಲಿ ಮದುವೆ ಮಾಡಿಕೊಳ್ಳಬೇಕಿದ್ದ ಎಮ್ಮಾ ಅಲಿಸಿಯಾ ಪಜ್‌ ಅಯ್ಲಾ ಎಂಬ ಮೆಕ್ಸಿಕೋದ ಯುವತಿ ತನ್ನ ಗೆಳತಿಯೊಂದಿಗೆ ಪಾರ್ಟಿಯೊಂದಕ್ಕೆ ತೆರಳಿದ್ದಾಳೆ. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದ ಎಮ್ಮಾ ಅಪರಿಚಿತ ವ್ಯಕ್ತಿಯೊಂದಿಗೆ ಚುಂಬನ ಮಾಡಿದ್ದಾಳೆ. ರೆಸಾರ್ಟ್‌ನಲ್ಲಿ ನಡೆದ ಈ ಪಾರ್ಟಿಯ ಈ ಚುಂಬಿಸುತ್ತಿದ್ದಾಗ ಅಲ್ಲಿದ್ದವರೇ ವಿಡಿಯೋ ಮಾಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ  ಭಾವಿ ಪತಿ ಹಾಗೂ ಆತನ ಕುಟುಂಬ ಮದುವೆಯನ್ನು ರದ್ದುಗೊಳಿಸಿದೆ. 

ಕೇವಲ ಒಂದೇ ನಿಮಿಷದ ಈ ವಿಡಿಯೋ ಇದೀಗ ಮದುವೆಯನ್ನೇ ಮುರಿದು ಹಾಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೈಋತ್ಯ ರೈಲ್ವೆ ಜೂನ್‌ ಒಂದೇ ತಿಂಗಳಲ್ಲಿ ದಾಖಲೆಯ ₹733 ಕೋಟಿ ಆದಾಯ! ವಿಶೇಷ ರೈಲುಗಳ ಸೇವೆ ಆ.31 ರವರೆಗೆ ವಿಸ್ತರಣೆ
GBA Clear Footpath encroachment: 'ನೋಟಿಸ್ ಕೊಟ್ಟಿಲ್ಲ, ಆದ್ರೆ ಲಂಚ ಕೇಳಿದ್ರು..' ಬನಶಂಕರೀಲಿ ನಂದಿನಿ ಶಾಪ್ ನೆಲಸಮ, ಬೀದಿಗೆ ಬಿದ್ದ ಮಾಲಕಿ