ತಿಳಿ ಬಣ್ಣದ ಬಟ್ಟೆ ಧರಿಸಿ: ನೀಟ್‌ಗೆ ವಸ್ತ್ರ ಸಂಹಿತೆ

First Published Apr 20, 2018, 1:34 PM IST
Highlights

ಎಂಬಿಬಿಎಸ್‌ ಮತ್ತು ದಂತ ವೈದ್ಯಕೀಯ ಪದವಿ ಪ್ರವೇಶಕ್ಕೆ ಮೇ 6ರಂದು ನಡೆಯುವ ನೀಟ್‌ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ.

ನವದೆಹಲಿ: ಎಂಬಿಬಿಎಸ್‌ ಮತ್ತು ದಂತ ವೈದ್ಯಕೀಯ ಪದವಿ ಪ್ರವೇಶಕ್ಕೆ ಮೇ 6ರಂದು ನಡೆಯುವ ನೀಟ್‌ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ.

ವಸ್ತ್ರಸಂಹಿತೆ ಪ್ರಕಾರ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಿಳಿ ವರ್ಣದ ಅರ್ಧ ಕೈತೋಳಿನ ಬಟ್ಟೆಧರಿಸಬೇಕು ಮತ್ತು ಕೊಠಡಿಯೊಳಗೆ ಶೂ ಧರಿಸದೆ ಚಪ್ಪಲಿ ಧರಿಸಬೇಕೆಂದು ಹೇಳಿದೆ. ಅಲ್ಲದೆ 2017ರ ವಸ್ತ್ರಸಂಹಿತೆಯನ್ನೇ ಪುನರುಚ್ಚರಿಸಿರುವ ಸಿಬಿಎಸ್‌ಇ ಪರೀಕ್ಷೆ ಪ್ರಾರಂಭಕ್ಕೂ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗತಕ್ಕದ್ದು ಎಂದು ಹೇಳಿದೆ.

ಕಳೆದ ವರ್ಷ ನೀಟ್‌ ವೇಳೆ ವಿದ್ಯಾರ್ಥಿಗಳು ಧರಿಸಿದ್ದ ಶಿರವಸ್ತ್ರವನ್ನು ಒತ್ತಾಯಪೂರ್ವಕವಾಗಿ ತಗೆಸಿದ್ದ ಸಿಬಿಎಸ್‌ಇ ಟೀಕೆಗೆ ಗುರಿಯಾಗಿದ್ದು, ಪ್ರತಿಭಟನೆಗೂ ಕಾರಣವಾಗಿತ್ತು.

click me!