ನಾವು ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ: ಎನ್'ಡಿಟಿವಿ ದಾಳಿಗೆ ಸಿಬಿಐ ಸ್ಪಷ್ಟನೆ

By Suvarna Web DeskFirst Published Jun 6, 2017, 8:53 PM IST
Highlights

ಎನ್ ಡಿಟಿವಿ ಮುಖ್ಯುಸ್ಥ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದು ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿರುವ ಆರೋಪಕ್ಕೆ ಸಿಬಿಐ ಸ್ಪಷ್ಟನೆ ನೀಡಿದೆ. ಮಾಧ್ಯಮ ಸ್ವಾತಂತ್ರವನ್ನು ನಾವು ಗೌರವಿಸುತ್ತೇವೆ. ಎನ್ ಡಿಟಿವಿ ನೊಂದಣಿ ಕಚೇರಿ, ಸ್ಟುಡಿಯೋ, ನ್ಯೂಸ್ ರೂಮ್ ಹಾಗೂ ಆವರಣದ ಮೇಲೆ ದಾಳಿ ನಡೆಸಿಲ್ಲ. ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ. ಎಂದು ಸಿಬಿಐ ಹೇಳಿದೆ.

ನವದೆಹಲಿ (ಜೂ.06):ಎನ್ ಡಿಟಿವಿ ಮುಖ್ಯುಸ್ಥ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದು ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿರುವ ಆರೋಪಕ್ಕೆ ಸಿಬಿಐ ಸ್ಪಷ್ಟನೆ ನೀಡಿದೆ. ಮಾಧ್ಯಮ ಸ್ವಾತಂತ್ರವನ್ನು ನಾವು ಗೌರವಿಸುತ್ತೇವೆ. ಎನ್ ಡಿಟಿವಿ ನೊಂದಣಿ ಕಚೇರಿ, ಸ್ಟುಡಿಯೋ, ನ್ಯೂಸ್ ರೂಮ್ ಹಾಗೂ ಆವರಣದ ಮೇಲೆ ದಾಳಿ ನಡೆಸಿಲ್ಲ. ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ. ಎಂದು ಸಿಬಿಐ ಹೇಳಿದೆ.

ಸಿಬಿಐ ನ ಇಮೇಜ್ ಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕಾನೂನಿನ ಅಡಿಯಲ್ಲಿ ತನಿಖೆ ನಡೆಸಲಾಗಿದೆ. ತನಿಖಾ ವರದಿಯನ್ನು ಸಾಕ್ಷಿ ಸಮೇತ ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು. ಐಸಿಐಸಿಐ ಬ್ಯಾಂಕ್ ಶೇರ್ ಹೋಲ್ಡರ್ ನೀಡಿರುವ ದೂರಿನ ಆಧಾರದ ಮೇಲೆ ನ್ಯಾಯಾಲಯ ವಾರಂಟ್ ನೀಡಿತ್ತು. ಇದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ 48 ಕೋಟಿ ಪಾವತಿಸದೇ ಬ್ಯಾಂಕ್ ಗೆ ನಷ್ಟವನ್ನುಂಟು ಮಾಡಿ ತಾವು ಅಕ್ರಮ ಗಳಿಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.  

click me!