ಜೈಲ್ಗೆ ಹೋದ್ರೂ ಡಬ್ಬಿಂಗ್ ಸಿನಿಮಾ ನಮಗೆ ಬೇಡ; ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ

By Suvarna Web DeskFirst Published Mar 1, 2017, 1:30 PM IST
Highlights

ರಾಜ್ಯದಲ್ಲಿ ಡಬ್ಬಿಂಗ್ ಫಿಲಂ ರಿಲೀಸ್ ವಿರುದ್ಧ ಹೋರಾಟ ಶುರುವಾಗಿದೆ. ಪ್ರೆಸ್ ಕ್ಲಬ್​ನಲ್ಲಿ ವಾಟಾಳ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್, ಎಂ.ಎಸ್ .ರಮೇಶ್, ರಂಗಾಯಣ ರಘು ಭಾಗಿಯಾದರು.

ಬೆಂಗಳೂರು (ಮಾ.01): ರಾಜ್ಯದಲ್ಲಿ ಡಬ್ಬಿಂಗ್ ಫಿಲಂ ರಿಲೀಸ್ ವಿರುದ್ಧ ಹೋರಾಟ ಶುರುವಾಗಿದೆ. ಪ್ರೆಸ್ ಕ್ಲಬ್​ನಲ್ಲಿ ವಾಟಾಳ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್, ಎಂ.ಎಸ್ .ರಮೇಶ್, ರಂಗಾಯಣ ರಘು ಭಾಗಿಯಾದರು.

ತಮಿಳು ನಟ ಅಜಿತ್ ನಟನೆಯ ಎನ್ನೈ ಅರಿಂದಾಲ್ ಚಿತ್ರ ಕನ್ನಡಕ್ಕೆ ಸತ್ಯದೇವ್ ಐಪಿಎಸ್ ಆಗಿ ರಾಜ್ಯದಲ್ಲಿ ಬಿಡುಗಡೆಗೆ ತಯಾರಿ ನಡೆದಿದೆ. ಮಾರ್ಚ್ 3 ರಂದು ರಾಜ್ಯದ 60 ಚಿತ್ರಮಂದಿರಗಳಲ್ಲಿ ಡಬ್ಬಿಂಗ್​ ಸಿನಿಮಾ ಪ್ರದೆಶನಗೊಳ್ಳಲಿದೆ. ರಾಜ್ಯದಲ್ಲಿ ಡಬ್ಬಿಂಗ್ ಚಿತ್ರ ಬಿಡುಗಡೆ ಮಾಡೋಕೆ ಬಿಡೋದಿಲ್ಲ. ಜೈಲ್ಗೆ ಹೋದರು ಸರಿಯೇ, ಡಬ್ಬಿಂಗ್​ ಸಿನಿಮಾ ನಮಗೆ ಬೇಡ. ಡಬ್ಬಿಂಗ್ ಚಿತ್ರ ರಿಲೀಸ್ ಆದ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ನಟ ಜಗ್ಗೇಶ್ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕೆಲವು ಜನರು ಡಬ್ಬಿಂಗ್ ಪರವಾಗಿದ್ದಾರೆ. ಪರಭಾಷಾ ಚಿತ್ರಗಳು ಬೆಂಗಳೂರಲ್ಲಿ ರಿಲೀಸ್ ಆಗುತ್ತಿವೆ. 17ರಿಂದ 18 ಲಕ್ಷ ಜನ ತಮಿಳುನಾಡಲಿ ಇದ್ದಾರೆ. ಆದರೆ ಯಾರು ಅಲ್ಲಿ ಕನ್ನಡ ಚಿತ್ರಗಳು ರಿಲೀಸ್ ಆಗುವುದಿಲ್ಲ. ಬೇರೆ ಭಾಷ್ಯ ಚಿತ್ರಗಳು ಅಲ್ಲಿ ಹೆಚ್ಚು ರಿಲೀಸ್ ಆಗಲ್ಲ. ಪರರಾಜ್ಯದಲಿ ಅವರ ಭಾಷೆಯ ಚಿತ್ರಗಳು ರಿಲೀಸ್ ಆಗುತ್ತವೆ. ಡಬ್ಬಿಂಗ್​ಗಾಗಿ ವ್ಯವಸ್ಥಿತ  ತಯಾರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

click me!