ಕೋರ್ಟ್ ರೂಂನಲ್ಲೇ ವಿಷ ಸೇವಿಸಿ ಸಾವು!

Published : Nov 30, 2017, 08:31 PM ISTUpdated : Apr 11, 2018, 12:59 PM IST
ಕೋರ್ಟ್ ರೂಂನಲ್ಲೇ ವಿಷ ಸೇವಿಸಿ ಸಾವು!

ಸಾರಾಂಶ

1990ರ ದಶಕದಲ್ಲಿ ಬೊಸ್ನಿಯಾದ ‘ಬೋಸ್ನಿಯನ್ ಕ್ರಾಟ್’ ರಾಜ್ಯದಿಂದ ಮುಸ್ಲಿಮರನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರು ಸೇನಾಧಿಕಾರಿಗಳಲ್ಲಿ ಪ್ರಾಲ್ಜಾಕ್ (72) ಕೂಡ ಒಬ್ಬರಾಗಿದ್ದರು.

ಹೇಗ್(ನ.30): ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಧಿಕರಣ ‘ಯುದ್ಧಪರಾಧ’ಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ತೀರ್ಪು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಬೋಸ್ನಿಯಾದ ಮಾಜಿ ಸೇನಾಧಿಕಾರಿಯೊಬ್ಬರು ಕೋರ್ಟ್ ರೂಂನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೆದರ್ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಧಿಕರಣವು ಬೋಸ್ನಿಯಾದ ಮಾಜಿ ಸೇನಾಧಿಕಾರಿ ಸ್ಲೊಬೊಡಾನ್ ಪ್ರಾಲ್ಜಾಕ್ ವಿರುದ್ಧದ 20 ವರ್ಷದ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿತ್ತು. ತೀರ್ಪು ಹೊರಬೀಳುತ್ತಿದ್ದಂತೆ, ‘ನಾನು ಅಪರಾಧಿಯಲ್ಲ, ನಾನು ವಿಷ ಕುಡಿದಿದ್ದೇನೆ, ನಾನು ಯುದ್ಧ ಅಪರಾಧಿಯಲ್ಲ, ಶಿಕ್ಷೆಯನ್ನು ನಾನು ವಿರೋಧಿಸುತ್ತೇನೆ’ ಎಂದು ಹೇಳಿ ಪ್ರಾಲ್ಜಾಕ್ ವಿಷ ಸೇವಿಸಿದ್ದಾರೆ.

1990ರ ದಶಕದಲ್ಲಿ ಬೊಸ್ನಿಯಾದ ‘ಬೋಸ್ನಿಯನ್ ಕ್ರಾಟ್’ ರಾಜ್ಯದಿಂದ ಮುಸ್ಲಿಮರನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರು ಸೇನಾಧಿಕಾರಿಗಳಲ್ಲಿ ಪ್ರಾಲ್ಜಾಕ್ (72) ಕೂಡ ಒಬ್ಬರಾಗಿದ್ದರು. ತಮ್ಮ ಕಕ್ಷಿದಾರ ವಿಷ ಸೇವಿಸಿದ್ದಾರೆ ಎಂದು ಅವರ ನ್ಯಾಯವಾದಿ ಕೂಗಿದ ಬಳಿಕ, ವಿಚಾರಣೆ ಸ್ಥಗಿತಗೊಳಿಸಿ ಕೋರ್ಟ್ ರೂಂ ಮುಚ್ಚಲಾಯಿತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ, ಅವರು ಕೊನೆಯುಸಿರೆಳೆದರು. ಇಡೀ ಘಟನೆ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!