
ಹೊಸದಿಲ್ಲಿ (ಡಿ.23): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇಶದಲ್ಲೇ ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಸೆಲಿಬ್ರಿಟಿ ಮಾತ್ರವಲ್ಲ, ಈ ವರ್ಷ ಅತಿಹೆಚ್ಚು ಸಂಪಾದನೆ ಮಾಡಿರುವ ಕ್ರೀಡಾಪಟು ಸಹ ಹೌದು.
ಫೋರ್ಬ್ಸ್ ಇಂಡಿಯಾ ಸಂಸ್ಥೆ 2017 ರಲ್ಲಿ ಪ್ರಾಯೋಜಕತ್ವ, ಜಾಹೀರಾತು ಒಪ್ಪಂದಗಳಿಂದ ಅತಿಹೆಚ್ಚು ಸಂಪಾದಿಸಿದ ಅಗ್ರ 100 ಸೆಲಿಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿ ದ್ದು, ಕ್ರೀಡಾ ವಿಭಾಗದಲ್ಲಿ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ವರ್ಷ ಕೊಹ್ಲಿಯ ಒಟ್ಟು ಗಳಿಕೆ ಬರೋಬ್ಬರಿ 100.72 ಕೋಟಿಯಾಗಿದೆ.
ಒಟ್ಟಾರೆ ವಿರಾಟ್ 3ನೇ ಸ್ಥಾನ ಪಡೆದಿದ್ದು, ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಅಗ್ರ 100ರ ಪಟ್ಟಿಯಲ್ಲಿ 21 ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.