
ನವದೆಹಲಿ(ಅ.22): ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಆಧಾರಸ್ತಂಭ. ಮೈದಾನದಲ್ಲಿದ್ದಷ್ಟು ಹೊತ್ತು ಬೌಲರ್`ಗಳನ್ನ ಕಾಡುವ ಪರಿಪೂರ್ಣ ಬ್ಯಾಟ್ಸ್`ಮನ್. ಕೊಹ್ಲಿಯ ಆಕ್ರಮಣಕಾರಿ ಆಟ ಎಂತಹುದೆಂದರೆ ವಿಶ್ವದ ಘಟಾನುಘಟಿ ಬೌಲರ್`ಗಳೇ ಕೊಹ್ಲಿ ಎದುರು ಬೌಲ್ ಮಾಡುವುದಕ್ಕೆ ಬೆಚ್ಚುವುದುಂಟು.
ಆದರೆ, ಈ ಮೈದಾನದ ಕಿಂಗ್ ಈಗಲೂ ಒಬ್ಬರಿಗೆ ಭಯಪಡುತ್ತಾರೆ. ಅದು ಅವರ ಬಾಲ್ಯದ ಕೋಚ್ ರಾಜ್`ಕುಮಾರ್ ಶರ್ಮಾ ಅವರಿಗೆ. ಈ ಕುರಿತು ಸ್ವತಃ ಕೊಹ್ಲಿ ಹೇಳಿಕೊಂಡಿದ್ಧಾರೆ. ಕೋಚ್ ಮತ್ತು ಐಪಿಎಲ್ ತಂಡಕ್ಕೆ ತಮ್ಮ ನಿಷ್ಠೆ ಬಗ್ಗೆ ಹೇಳಿಕೊಂಡಿದ್ದಾರೆ. 1998ರಿಂದ ನಾನು ಒಬ್ಬರೇ ಕೋಚ್(ರಾಜ್ ಕುಮಾರ್ ಶರ್ಮಾ) ಹೊಂಡಿದ್ದೇನೆ ಮತ್ತು ಐಪಿಎಲ್`ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಇದ್ದೇನೆ ಎಂದಿದ್ಧಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕ್ರಿಕೆಟ್ ದಂತಕಥೆಗಳಾದ ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಸೆಹ್ವಾಗ್ ಜೊತೆ ವೇದಿಕೆ ಹಂಚಿಕೊಂಡಿದ್ದ ಕೊಹ್ಲಿ, ತಾವು ಈಗಲೂ ಭಯಪಡುವ ವ್ಯಕ್ತಿ ಬಗ್ಗೆ ಹೇಳಿದ್ದಾರೆ.
`ಒಳ್ಳೆಯದಕ್ಕಾಗಿ ಬೈಯುವ ಆ ವ್ಯಕ್ತಿಗೆ ಮಾತ್ರ ನಾನು ಹೆದರುತ್ತೇನೆ. ಈಗಲೂ ಅವರೇನಾದರೂ ಹೇಳಿದರೆ ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ. ತಿರುಗಿಸಿ ಮಾತನಾಡುವುದಿಲ್ಲ. ಆ ರೀತಿ ಯಾರಾದರೂ ಇರುವುದು ಉತ್ತಮ' ಎಂದು ಕೊಹ್ಲಿ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.