ಭ್ರಷ್ಟ ಅಧಿಕಾರಿಗಳಿಗೆ ಮಾಧ್ಯಮಗಳೆದುರೇ ಮರಣ ದಂಡನೆ ನೀಡಿದರಾ ಕಿಮ್?

By Web DeskFirst Published Aug 4, 2018, 5:01 PM IST
Highlights

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್-ಜಾಂಗ್ -ಉನ್ ಭ್ರಷ್ಟ ಅಧಿಕಾರಿಯೊಬ್ಬರಿಗೆ ಮಾಧ್ಯಮಗಳ ಎದುರಿನಲ್ಲಿಯೇ ಮರಣದಂಡನೆ ಶಿಕ್ಷೆ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಇದು ನಿಜನಾ? 

ಉತ್ತರ ಕೊರಿಯಾ (ಆ. 04): ಸರ್ವಾಧಿಕಾರಿ ಕಿಮ್-ಜಾಂಗ್ -ಉನ್ ಭ್ರಷ್ಟ ಅಧಿಕಾರಿಯೊಬ್ಬರಿಗೆ ಮಾಧ್ಯಮಗಳ ಎದುರಿನಲ್ಲಿಯೇ ಮರಣದಂಡನೆ ಶಿಕ್ಷೆ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದೊಂದಿಗೆ ‘ಉತ್ತರ ಕೊರಿಯಾ ನಾಯಕ ಕಿಮ್, ವ್ಯಕ್ತಿಯೊಬ್ಬನೊಂದಿಗೆ ಆಟೋಮ್ಯಾಟೆಡ್ ಕ್ಯಾವಿಟಿ ನೆಲದ ಮೇಲೆ ನಡೆದು ಹೋಗುತ್ತಿರುವ ದೃಶ್ಯವಿದು. 12 ಸೆ.ಗಳ ಈ ವಿಡಿಯೋದಲ್ಲಿ ಕಿಮ್ ವ್ಯಕ್ತಿ ಕುಶಲೋಪರಿ ವಿಚಾರಿಸಿ ನಡೆದು ಹೋಗುತ್ತಿರುವಾಗ ಹಠಾತ್ ನೆಲಮಹಡಿ ತೆರೆದೊಳ್ಳುತ್ತದೆ. ವ್ಯಕ್ತಿ ಗುಂಡಿಯೊಳಕ್ಕೆ ಬೀಳುತ್ತಾನೆ ಬಳಿಕ ಅದನ್ನು ಮುಚ್ಚಲಾಗುತ್ತದೆ. ತದನಂತರ ಕಿಮ್-ಜಾಂಗ್-ಉನ್ ಒಬ್ಬರೇ ಮರಳಿ ಬರುತ್ತಾರೆ. ಈ ಸನ್ನಿವೇಶದ ಸಂಪೂರ್ಣ ಚಿತ್ರ ಮಾಧ್ಯಮ ಗಳಲ್ಲಿ ಸೆರೆಯಾಗಿದೆ’ ಎಂದು ಅಡಿಬರಹ ಬರೆಯಲಾಗಿದೆ.

ಆದರೆ ನಿಜಕ್ಕೂ ಕಿಮ್ ಭ್ರಷ್ಟ ಅಧಿಕಾರಿಗೆ ಮರಣದಂಡನೆ ನೀಡಿದ್ದು ನಿಜವೇ ಎಂದು ಹುಡಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಕಿಮ್-ಜಾಂಗ್-ಉನ್ ಜೊತೆಗಿರುವವರು ಉತ್ತರ ಕೊರಿಯಾ ಅಧಿಕಾರಿಯೇ ಅಲ್ಲ. ವಿಡಿಯೋವನ್ನು ಎಡಿಟ್ ಮಾಡಿ ಈ ರೀತಿ ಸೃಷ್ಟಿಸಲಾಗಿದೆ.

2018 ಏಪ್ರಿಲ್‌ನಲ್ಲಿ ಜರುಗಿದ್ದ ಅಂತರ ಕೊರಿಯನ್ ಶೃಂಗದಲ್ಲಿ ನಡೆದ ಸಭೆಯ ವಿಡಿಯೋವಿದು. ವಾಸ್ತವವಾಗಿ ಅಂದು ಉತ್ತರಕೊರಿಯಾ ನಾಯಕ ಕಿಮ್, ದಕ್ಷಿಣ ಕೊರಿಯಾ ಎಲ್ಲೆಯನ್ನು ದಾಟಿ ಶೃಂಗಕ್ಕೆ ಭೇಟಿ ನೀಡಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಎರಡೂ ದೇಶಗಳ ಇತಿಹಾಸದಲ್ಲಿ ಅವಿಸ್ಮರಣೀಯ ಘಟನೆಯಾಗಿ ದಾಖಲಾಗಿತ್ತು. ಎರಡೂ ದೇಶದ ನಾಯಕರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಉತ್ತರ ಕೊರಿಯಾ ನಾಯಕ ಕಿಮ್ ಹಾಗೂ ದಕ್ಷಿಣ ಕೊರಿಯಾ ನಾಯಕ ಮೂನ್-ಜೆ ಹಸ್ತಲಾಗವ ಮಾಡಿದ್ದ ವಿಡಿಯೋವನ್ನೇ ತಿರುಚಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಭ್ರಷ್ಟ ಅಧಿಕಾರಿಗೆ ಮರಣ ದಂಡನೆ ನೀಡಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ.  

click me!