ಭಾರತದಲ್ಲಿ ಹಾಲು ತಯಾರಾಗೋದು ಹೀಗಂತೆ: ವೈರಲ್ ವಿಡಿಯೋ!

By Web DeskFirst Published Oct 10, 2018, 3:55 PM IST
Highlights

ಭಾರತದಲ್ಲಿ ಹಾಲು ಕಲಬೆರಕೆ ಪ್ರಮಾಣ ಎಷ್ಟು ಗೊತ್ತಾ?! ಈ ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನರೆಷ್ಟು?! ಕಲಬೆರಕೆ ಹಾಲಿನಿಂದ ಮಾರಕ ಕ್ಯಾನ್ಸರ್ ರೋಗ ಬರುತ್ತಾ?! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಫೇಕ್ ವಿಡಿಯೋ!

ಬೆಂಗಳೂರು(ಅ.10): ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತಾರಲ್ಲಾ ಅದು ಈ ವಿಡಿಯೋಗೆ ಅದೆಷ್ಟು ಸರಿಯಾಗಿ ಅನ್ವಯಿಸುತ್ತದೆ ನೋಡಿ. ಭಾರತದಲ್ಲಿ ಹಾಲು ಕಲಬೆರಕೆ ಪ್ರಮಾಣ ಕಂಡು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಬೆಚ್ಚಿ ಬಿದ್ದಿದೆ ಎಂಬ ಈ ಫೇಕ್ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಹಾಲು ಕಲಬೆರಕೆ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಾಲು ಕಲಬೆರಕೆ ಹೇಗೆ ನಡೆಯುತ್ತದೆ ಎಂಬ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

ರೋಹಿತ್ ಬರೊನಾ ಎಂಬ ವ್ಯಕ್ತಿಯ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಹಾಲು ಕಲಬೆರಕೆ ಪ್ರಮಾಣ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಮಾಹಿತಿ ಪ್ರಕಾರ ಭಾರತದಲ್ಲಿ ವಾರ್ಷಿಕ ಕೇವಲ 14 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆದರೆ ಭಾರತದಲ್ಲಿ ವಾರ್ಷಿಕ ಬರೋಬ್ಬರಿ 50 ಕೋಟಿ ಲೀಟರ್ ಹಾಲು ಮಾರಾಟವಾಗುತ್ತದೆ ಎಂದು ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸುಳ್ಳು ಎಂದು ಸಾಬೀತಾಗಿದ್ದು, ಅಸಲಿಗೆ ಇದು ಮನೆಯಲ್ಲೇ ವೈಟ್ ಫಿನೈಲ್ ತಯಾರಿಸುವ ಬಗೆಯ ಕುರಿತದ್ದಾಗಿದೆ ಎನ್ನಲಾಗಿದೆ.

ರೋಹಿತ್ ಬರೊನಾ ಶೇರ್ ಮಾಡಿರುವ ಈ ವಿಡಿಯೋವನ್ನು 1.7 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.

click me!