ಕಾಂಗ್ರೆಸ್‌ ದೇಶವನ್ನು ನಾಶ ಮಾಡುತ್ತೆ - ಹೀಗೆ ಪ್ರಣಬ್‌ ಮುಖರ್ಜಿ ಹೇಳಿದರಾ ..?

Published : Jun 27, 2018, 01:00 PM IST
ಕಾಂಗ್ರೆಸ್‌ ದೇಶವನ್ನು ನಾಶ ಮಾಡುತ್ತೆ - ಹೀಗೆ ಪ್ರಣಬ್‌ ಮುಖರ್ಜಿ ಹೇಳಿದರಾ ..?

ಸಾರಾಂಶ

ಇದೀಗ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಹೇಳಿಕೆಯಲ್ಲಿ ಒಂದು ವೇಳೆ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗದಿದ್ದರೆ, ಕಾಂಗ್ರೆಸ್‌ ಭಾರತವನ್ನು ನಿರ್ನಾಮ ಮಾಡಲಿದೆ ಎಂದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆನ್ನಲಾಗಿದೆ. 

ನವದೆಹಲಿ :  ಕಳೆದ ಕೆಲ ತಿಂಗಳಿನಿಂದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕುರಿತಾದ ಸುಳ್ಳು ಸುದ್ದಿಗಳು ಸಾಕಷ್ಟುಸಂಖ್ಯೆಯಲ್ಲಿ ಹರಿದಾಡುತ್ತಿವೆ. ಇದೀಗ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಹೇಳಿಕೆಯಲ್ಲಿ ಒಂದು ವೇಳೆ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗದಿದ್ದರೆ, ಕಾಂಗ್ರೆಸ್‌ ಭಾರತವನ್ನು ನಿರ್ನಾಮ ಮಾಡಲಿದೆ ಎಂದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆನ್ನಲಾಗಿದೆ.

ಬಾರ್‌ ಬಾರ್‌ ಮೋದಿ ಸರ್ಕಾರ ಎಂಬ ಫೇಸ್‌ಬುಕ್‌ ಪೇಜ್‌ ಈ ಹೇಳಿಕೆಯೊಂದಿಗೆ ನೀವು ಪ್ರಣಬ್‌ ಮುಖರ್ಜಿ ಹೇಳಿಕೆಯನ್ನು ಒಪ್ಪುತ್ತೀರಾ? ಎಂದು ಅಡಿಬರಹ ಬರೆದು ಮೊದಲಿಗೆ ಶೇರ್‌ ಮಾಡಿದೆ. ಈ ಹೇಳಿಕೆಯನ್ನು ಜೂನ್‌ 2ರಂದು ಪೋಸ್ಟ್‌ ಮಾಡಿದಾಗಿನಿಂದ 2500 ಬಾರಿ ಶೇರ್‌ ಮಾಡಲಾಗಿದೆ. ಸದ್ಯ ಈ ಹೇಳಿಕೆ ವೈರಲ್‌ ಆಗಿದೆ.

ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಿಜಕ್ಕೂ ಈ ರೀತಿ ಹೇಳಿಕೆ ನೀಡಿದ್ದರೇ ಎಂದು ಆಲ್ಟ್‌ ನ್ಯೂಸ್‌ ತನಿಖೆಗೆ ಮುಂದಾದಾಗ ಈ ಹೇಳಿಕೆ ಪ್ರಣಬ್‌ ಮುಖರ್ಜಿ ಹೇಳಿರುವುದು ಸುಳ್ಳು ಎಂಬುದು ಸಾಬೀತಾಗಿದೆ. ಆಲ್ಟ್‌ ನ್ಯೂಸ್‌ ಮಾಜಿ ರಾಷ್ಟ್ರಪತಿ ಕಚೇರಿಯಲ್ಲಿಯೇ ಈ ಕುರಿತು ಸ್ಪಷ್ಟೀಕರಣ ಕೇಳಿದ್ದು, ಅದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತವಾದುದು. ಮಾಜಿ ರಾಷ್ಟ್ರಪತಿಗಳು ಆ ರೀತಿಯ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.

ಪ್ರಣಬ್‌ ಮುಖರ್ಜಿ ಕುರಿತ ಸುಳ್ಳು ಸುದ್ದಿಗಳು ಇದೇ ಹೊಸತೇನಲ್ಲ. ಕೆಲವು ದಿನಗಳ ಹಿಂದಷ್ಟೇ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖರ್ಜಿ ಆರ್‌ಎಸ್‌ಎಸ್‌ನ ಇತರ ನಾಯಕರಂತೆ ಸಲ್ಯೂಟ್‌ ಮಾಡುತ್ತಿರುವಂತೆ ಫೋಟೋಶಾಪ್‌ ಮೂಲಕ ಚಿತ್ರವನ್ನು ಮಾರ್ಪಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಲಾಗಿತ್ತು. 

(ವೈರಲ್ ಚೆಕ್)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ