ಮತ್ತಷ್ಟು ಹೆಚ್ಚಾಗುತ್ತೆ ಬ್ಯಾಂಕ್‌ ಎನ್‌ಪಿಎ : ಆರ್ ಬಿ ಐ

First Published Jun 27, 2018, 12:48 PM IST
Highlights

ಸಹಸ್ರಾರು ಕೋಟಿ ರು. ಸಾಲ ಮಾಡಿದ ಉದ್ಯಮಿಗಳು ದೇಶ ತೊರೆಯುತ್ತಿರುವ ಬೆಳವಣಿಗೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಮುಂದಿನ ಹಣಕಾಸು ವರ್ಷದ ಅಂತ್ಯಕ್ಕೆ ಶೇ.12.2ಕ್ಕೆ ಏರಿಕೆಯಾಗುವ ಸಂಭವವಿದೆ ಎಂದು ಭಾರತೀಯ ರಿಸರ್ವ್  ಬ್ಯಾಂಕ್‌ (ಆರ್‌ಬಿಐ) ಎಚ್ಚರಿಕೆ ನೀಡಿದೆ. 

ಮುಂಬೈ: ಸಹಸ್ರಾರು ಕೋಟಿ ರು. ಸಾಲ ಮಾಡಿದ ಉದ್ಯಮಿಗಳು ದೇಶ ತೊರೆಯುತ್ತಿರುವ ಬೆಳವಣಿಗೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ಮುಂದಿನ ಹಣಕಾಸು ವರ್ಷದ ಅಂತ್ಯಕ್ಕೆ ಶೇ.12.2ಕ್ಕೆ ಏರಿಕೆಯಾಗುವ ಸಂಭವವಿದೆ ಎಂದು ಭಾರತೀಯ ರಿಸರ್ವ್  ಬ್ಯಾಂಕ್‌ (ಆರ್‌ಬಿಐ) ಎಚ್ಚರಿಕೆ ನೀಡಿದೆ. 2018ರ ಮಾರ್ಚ್ರ್ ಗೆ ಅನ್ವಯವಾಗುವಂತೆ ಬ್ಯಾಂಕುಗಳ ಎನ್‌ಪಿಎ ಶೇ.11.6ರಷ್ಟಿದೆ.

ಇದೇ ವೇಳೆ, ಕೆಟ್ಟಸಾಲ ನೀಡಿದ ಕಾರಣಕ್ಕೆ 11 ಬ್ಯಾಂಕುಗಳು ಆರ್‌ಬಿಐ ನಿಗಾದಲ್ಲಿವೆ. ಅವೆಂದರೆ- ಐಡಿಬಿಐ ಬ್ಯಾಂಕ್‌, ಯುಕೋ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ದೇನಾ ಬ್ಯಾಂಕ್‌, ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪೋರೆಷನ್‌ ಬ್ಯಾಂಕ್‌, ಅಲಹಾಬಾದ್‌ ಬ್ಯಾಂಕ್‌.

ಠೇವಣಿ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದರೂ, ಸಾಲ ವಿತರಣೆ ಪ್ರಮಾಣ 2017-18ನೇ ಸಾಲಿನಲ್ಲಿ ಹೆಚ್ಚಳವಾಗಿದೆ. ಬ್ಯಾಂಕುಗಳ ಲಾಭದ ಪ್ರಮಾಣ ಕುಸಿತ ಕಂಡಿದೆ ಎಂದೂ ವರದಿ ಹೇಳಿದೆ.

click me!