ವೈರಲ್ ಚೆಕ್| ಎಟಿಎಂ ಕಾರ್ಡ್‌ ರೀತಿಯ ಪಾಸ್‌ಪೋರ್ಟ್‌?

By Web DeskFirst Published Mar 19, 2019, 8:47 AM IST
Highlights

ಎಟಿಎಂ ಕಾರ್ಡ್‌ ರೀತಿಯ ಪಾಸ್‌ಪೋರ್ಟ್‌ಅನ್ನು ಭಾರತ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ೀ ಸುದ್ದಿ ನಿಜಾನಾ? ಇಲ್ಲಿದೆ ಮಾಹಿತಿ

ನವದೆಹಲಿ[ಮಾ.19]: ಡೆಬಿಟ್‌ ಕಾರ್ಡ್‌, ಎಟಿಎಂ ಕಾರ್ಡ್‌ ರೀತಿಯ ಪಾಸ್‌ಪೋರ್ಟ್‌ಅನ್ನು ಭಾರತ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೂತನ ಸ್ಮಾರ್ಟ್‌ ಪಾಸ್‌ಪೋರ್ಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಸ್ಮಾರ್ಟ್‌ ಕಾರ್ಡಿದ್ದರೆ ಯಾವುದೇ ಗುರುತಿನ ಚೀಟಿ ಬೇಡ. ಇದು ಡೆಬಿಟ್‌/ ಎಟಿಎಂ ಕಾರ್ಡ್‌ನಂತೆಯೇ ಇದ್ದು, ಏರ್‌ಪೋರ್ಟ್‌ಗಳಲ್ಲಿ ಸ್ವೈಪ್‌ ಮಾಡಿದರೆ ಸಾಕು’ ಎಂದು ವಿವರಣೆ ಬರೆದು ಫೋಟೋ ಹೊಂದಿರುವ ಸ್ಮಾರ್ಟ್‌ಕಾರ್ಡ್‌ವೊಂದರ ಚಿತ್ರವನ್ನು ಪೋಸ್ಟ್‌ ಮಾಡಲಾಗುತ್ತಿದೆ.

ಹೀಗೆ ವೈರಲ್‌ ಆಗಿರುವ ಫೋಟೋವನ್ನು ಗೂಗಲ್‌ನಲ್ಲಿ ಅಪ್‌ಲೋಡ್‌ ಮಾಡಿ, ಹುಡುಕ ಹೊರಟಾಗ ಈ ಕುರಿತ ‘ದಿ ಪಾಸ್‌ಪೋರ್ಟ್‌ ಕಾನ್ಸೆಪ್ಟ್‌’ ಎಂಬ ಸುದ್ದಿ ತೆರೆದುಕೊಂಳ್ಳುತ್ತದೆ. ಅದರಲ್ಲಿ ಇಂಜೀನಿಯರ್‌, ವಿನ್ಯಾಸಕ ಸಿದ್ಧಾಂತ್‌ ಗುಪ್ತಾ ಎಂಬುವವರು ಪಾಕೆಟ್‌ ಸೈಜ್‌ ಇರುವ ಪಾಸ್‌ಪೋರ್ಟ್‌ನ್ನು ವಿನ್ಯಾಸಗೊಳಿಸಿದ್ದಾರೆ ಎಂದಿದೆ.

ಅಲ್ಲದೆ ವೈರಲ್‌ ಆಗಿರುವ ಕಾರ್ಡ್‌ ಫೋಟೋದಲ್ಲಿ ಅವರ ಹಸರೇ ಇದೆ. ಇದೇ ಫೋಟೋವನ್ನು ಬಳಸಿಕೊಂಡು ಭಾರತದಲ್ಲಿ ಶೀಘ್ರವೇ ಈ ರೀತಿಯ ಪಾಸ್‌ಪೋರ್ಟ್‌ ಬಿಡುಗಡೆಯಾಗುತ್ತದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

click me!