
ಬೆಂಗಳೂರು (ಜ. 31): ಅತ್ಯಾಕರ್ಷಕ ರಾಷ್ಟ್ರೀಯ ಹೆದ್ದಾರಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಟೋದೊಂದಿಗೆ ‘ಇದು ಸ್ವೀಡನ್ ಅಲ್ಲ, ಸ್ವಿಡ್ಜರ್‌ಲ್ಯಾಂಡ್, ಯುರೋಪ್ ಅಲ್ಲ. ಇದು ಭಾರತ, ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್66 ಕಶೇದಿ ಘಾಟ್. ಮೇರಾ ಭಾರತ್ ಬದಲ್ ರಹಾ ಹೇ- ರಾಷ್ಟ್ರ ನಿರ್ಮಾತೃ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ಎಂದು ಒಕ್ಕಣೆ ಬರೆಯಲಾಗಿದೆ.
ಈ ಮೂಲಕ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೇ ಭಾರತದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಪರೋಕ್ಷವಾಗಿ ಹೇಳಲಾಗಿದೆ. ಆರ್‌ಎಸ್‌ಎಸ್ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಪೋಟೋವನ್ನು ಪೋಸ್ಟ್ ಮಾಡಿದ್ದು, ಅದು 700 ಬಾರಿ ಶೇರ್ ಆಗಿದೆ. ಇನ್ನೊಂದೆಡೆ ಇದೇ ಫೋಟೋ ಮತ್ತೊಂದು ಶೀರ್ಷಿಕೆಯಡಿ ವೈರಲ್ ಆಗಿದೆ.
ಅದರಲ್ಲಿ ಹೀಗಿದೆ ‘ಉತ್ತರದಲ್ಲಿ ಎಕ್ಸ್‌ಪ್ರೆಸ್ ವೇ, ಪೂರ್ವದಲ್ಲಿ ಡಬಲ್‌ಡೆಕ್ಕರ್ ಬ್ರಿಡ್ಜ್, ಈಗ ಪಶ್ಚಿಮದಲ್ಲಿ ಮುಂಬೈ-ಗೋವಾ ಎನ್‌ಎಚ್66 ಕಶೇದಿ ಘಾಟ್! ಇದನ್ನು ಮೋದಿ ಬಿಟ್ಟು ಮತ್ಯಾರು ಮಾಡಲು ಸಾಧ್ಯ?’ ಎಂದು ಒಕ್ಕಣೆ ಬರೆದು ಶೇರ್ ಮಾಡಲಾಗುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.