ವೈರಲ್ ಚೆಕ್: ಪಾಕ್‌ನಲ್ಲಿ ಬಾಂಬ್‌ಗೆ 15 ವಿಜ್ಞಾನಿಗಳು ಬಲಿ?

By Web Desk  |  First Published Mar 14, 2019, 9:04 AM IST

ಪಾಕಿಸ್ತಾನದ ಕರಾಚಿಯ ಮಸೀದಿಯೊಂದರಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡು 15 ಜನ ವಿಜ್ಞಾನಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂತಹುದ್ದೊಂದು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ? ಏನಿದರ ಅಸಲಿಯತ್ತು? ಇಲ್ಲಿದೆ ವಿವರ


ಕರಾಚಿ[ಮಾ.14]: ಕರಾಚಿಯಲ್ಲಿ ಬಾಂಬ್‌ ಪರೀಕ್ಷಾರ್ಥ ಪ್ರಯೋಗದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಸುದ್ದಿಯೊಂದು ವೈರಲ್‌ ಆಗಿದೆ. ಐಎನ್‌ಎ ಎಂಬ ಹೆಸರಿನ ಸುದ್ದಿಸಂಸ್ಥೆ ಹೆಸರಲ್ಲಿ ಚಿತ್ರವೊಂದನ್ನು ಪೋಸ್ಟ್‌ ಮಾಡಿ, ‘ಪಾಕಿಸ್ತಾನದ ಕರಾಚಿಯ ಮಸೀದಿಯೊಂದರಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡು 15 ಜನ ವಿಜ್ಞಾನಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಹೇಳಲಾಗಿದೆ.

Blast during bomb test in a Mosque, 15 scientists dead, 10 seriously injured. pic.twitter.com/gP2qxpyVeM

— INA News (@INA_Pakistan)

ಆದರೆ ನಿಜಕ್ಕೂ ಮಸೀದಿಯಲ್ಲಿ ಬಾಂಬ್‌ ಸ್ಫೋಟಗೊಂಡಿತ್ತೇ ಎಂದು ಪರಿಶೀಲಿಸಿದಾಗ, ಇದು ಹಳೆಯ ಚಿತ್ರ ಎಂದು ತಿಳಿದುಬಂದಿದೆ. ಐಎನ್‌ಎ ಹೆಸರೂ ನಕಲಿ ಎಂದು ಸಾಬೀತಾಗಿದೆ.

Tap to resize

Latest Videos

undefined

2004ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿರುವ ಮಸೀದಿಯೊಂದರಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ 5 ಮಂದಿ ಮೃತಪಟ್ಟಿದ್ದರು. ಸದ್ಯ ಅದೇ ಫೋಟೋವನ್ನು ಬಳಸಿಕೊಂಡು ಈಗ ಪಾಕಿಸ್ತಾನದ ಕರಾಚಿಯಲ್ಲಿ ಬಾಂಬ್‌ ಸ್ಫೋಟಗೊಂಡು ವಿಜ್ಞಾನಿಗಳು ಮೃತಪಟ್ಟಿದ್ದಾರೆಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

click me!