[ವೈರಲ್ ಚೆಕ್] ರಾಷ್ಟ್ರಪತಿ ಕೋವಿಂದ್‌ರನ್ನು ಅವಮಾನಿಸಿದ್ರಾ ನರೇಂದ್ರ ಮೋದಿ?

By Suvarna Web DeskFirst Published Nov 13, 2017, 2:34 PM IST
Highlights

ರಾಷ್ಟ್ರಪತಿಯವರು ಮತ್ತು ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸಾಕಷ್ಟು ಶಿಷ್ಟಾಚಾರ ಪಾಲಿಸಲಾಗುತ್ತದೆ. ಆದರೆ ಇತ್ತೀಚೆಗೆ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಒಟ್ಟಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಯ್ತಾ?

ರಾಷ್ಟ್ರಪತಿಯವರು ಮತ್ತು ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸಾಕಷ್ಟು ಶಿಷ್ಟಾಚಾರ ಪಾಲಿಸಲಾಗುತ್ತದೆ. ಆದರೆ ಇತ್ತೀಚೆಗೆ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಒಟ್ಟಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಯ್ತಾ?

ಇಂತಹದೊಂದು ವಿಡಿಯೋ ಕೆಲದಿನ ಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಷ್ಟಕ್ಕೂ ಈ ವಿಡಿಯೋದ ಸತ್ಯಾಸತ್ಯತೆ ಏನು ಅಂತ ನೋಡೋದಾದ್ರೆ, ಕಳೆದ ೫ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಐಎಎಸ್ ಅಧಿಕಾರಿ ಸೋಮನಾಥರವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಈ ಮದುವೆಯಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರೂ ಭಾಗವಹಿಸಿದ್ದು, ರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ ಎಂಬ ವಿಡಿಯೋ ಚರ್ಚೆ ಹುಟ್ಟುಹಾಕಿದೆ. ವಿಡಿಯೋದಲ್ಲಿ ಪ್ರಧಾನಿ ಮೋದಿ ಐಎಎಸ್ ಅಧಿಕಾರಿಯ ಕುಟುಂಬಸ್ಥರ ಜೊತೆ ಫೋಟೋ ಸೆಷನ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಈ ವೇಳೆ ಕೋವಿಂದ್ ಕೊಂಚ ದೂರದಲ್ಲಿ ನಿಂತಿರುತ್ತಾರೆ. ಇಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಗಿದೆ ಎಂಬುದು ಆರೋಪ.

ಆದರೆ ಆ ವಿಡಿಯೋದ ಅಸಲಿಯತ್ತು ಏನೆಂದರೆ, ವಿಡಿಯೋದಲ್ಲಿರುವವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಲ್ಲ. ಬದಲಾಗಿ ತಮಿಳುನಾಡು ಗವರ್ನರ್ ಭಂವರಿಲಾಲ್ ಪುರೋಹಿತ್. ರಾಮನಾಥ್ ಕೋವಿಂದ್ ಮತ್ತು ಭಂವರಿಲಾಲ್ ನೋಡಲು ಒಂದೇ ರೀತಿ ಇರೋದ್ರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಅವಾಂತರವಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ.

ಹೀಗಾಗಿ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಯವರನ್ನು ಅವಮಾನಿಸಿದ್ದಾರೆ ಎಂಬುದು ಸುಳ್ಳು ಸುದ್ದಿ.

click me!