ಚೌಕಿದಾರ್ ಚೋರ್ ಹೈ ಎಂದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ!

Published : Mar 09, 2019, 08:51 AM IST
ಚೌಕಿದಾರ್ ಚೋರ್ ಹೈ ಎಂದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ!

ಸಾರಾಂಶ

ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ‘ಚೌಕಿದಾರ್ ಹೀ ಚೋರ್ ಹೈ’ ಎಂದು ಬರೆದ ಸ್ಟಿಕ್ಕರ್‌ ಅನ್ನು ಗೋಡೆಗೆ ಅಂಟಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನವದೆಹಲಿ (ಮಾ. 09): ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ‘ಚೌಕಿದಾರ್ ಹೀ ಚೋರ್ ಹೈ’ ಎಂದು ಬರೆದ ಸ್ಟಿಕ್ಕರ್‌ಅನ್ನು ಗೋಡೆಗೆ ಅಂಟಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಲಿತ್ ಕುಮಾರ್ ಚೌಹಾಣ್ ಎನ್ನುವವರು ತಮ್ಮ ಫೇಸ್‌ಬುಕ್‌ನಲ್ಲಿ ಈ ಫೋಟೋ ಹಾಕಿ, ‘ತಂದೆಯೇ ಕಳ್ಳ ಅಂತ ಈಗ ಮಗ ಸಹ ಒಪ್ಪಿಕೊಂಡಿದ್ದಾನೆ’ ಎಂದು ಬರೆದಿದ್ದಾರೆ.  ಆದರೆ ಬೂಮ್ ಸುದ್ದಿಸಂಸ್ಥೆ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದರ ಮೂಲ ಚಿತ್ರ ಪತ್ತೆಯಾಗಿದೆ.

2019 ಫೆ. 13 ಕ್ಕೆ 2 ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅದರಲ್ಲಿ ಒಂದು ರಾಷ್ಟ್ರಧ್ವಜ ಹಿಡಿದಿರುವುದು, ಇನ್ನೊಂದು ‘ಮೇರಾ ಪರಿವಾರ್ ಭಾಜಪ ಪರಿವಾರ್’ ಅಭಿಯಾನದ ಭಾಗವಾಗಿ ತಮ್ಮ ಮನೆಯ ಹೊರಭಾಗದಲ್ಲಿ ಪ್ರಧಾನಿ ಮೋದಿ ಚಿತ್ರ ಅಂಟಿಸುತ್ತಿರುವುದು. ಎರಡನೇ ಚಿತ್ರವನ್ನು ಎಡಿಟ್ ಮಾಡಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

- ವೈರಲ್ ಚೆಕ್ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Karnataka News Live: ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’ - ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!