[ವೈರಲ್ ಚೆಕ್]ಸೌದಿ ಅರೇಬಿಯಾದ ನಾಗರಿಕತ್ವ ಪಡೆದ ರೋಬೋಟ್ ಶಿರಚ್ಛೇದ!

Published : Nov 14, 2017, 02:10 PM ISTUpdated : Apr 11, 2018, 01:09 PM IST
[ವೈರಲ್ ಚೆಕ್]ಸೌದಿ ಅರೇಬಿಯಾದ ನಾಗರಿಕತ್ವ ಪಡೆದ ರೋಬೋಟ್ ಶಿರಚ್ಛೇದ!

ಸಾರಾಂಶ

ಇತ್ತೀಚೆಗೆ ಸೌದಿ ಅರೇಬಿಯಾ ರೋಬೋಟ್‌ವೊಂದಕ್ಕೆ ನಾಗರಿಕತ್ವ ನೀಡಿದ್ದು ವಿಶ್ವದೆಲ್ಲೆಡೆ ಭಾರೀ ಸುದ್ದಿಯಾಗಿತ್ತು. ನಾಗರಿಕತ್ವ ಪಡೆದುಕೊಂಡ ವಿಶ್ವದ ಮೊದಲ ರೋಬೋಟ್ ಎಂಬ ಹೆಗ್ಗಳಿಕೆಗೆ ಸೋಫಿಯಾ ರೋಬೋಟ್ ಪಾತ್ರವಾಗಿತ್ತು. ಆದರೆ, ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಾರ್ವಜನಿಕವಾಗಿ ಸೋಫಿಯಾ ರೊಬೋಟ್ ಅನ್ನು ಶಿರಚ್ಛೇದ ಮಾಡಲಾಗಿದೆಯಂತೆ.

ಸೋಫಿಯಾ ರೋಬೋಟ್ ಪುರುಷರ ಬೆಂಗಾವಲಿಲ್ಲದೇ ನಗರದೆಲ್ಲೆಡೆ ಸಂಚರಿಸುತ್ತಿದೆ. ಇಸ್ಲಾಂ ಸಂಪ್ರದಾಯದಂತೆ ಬುರ್ಖಾ ಧರಿಸುತ್ತಿಲ್ಲ. ಅದರ ಹೊಳೆಯುವ ಪ್ಲಾಸ್ಟಿಕ್ ಕಣ್ಣುಗಳಿಗೆ ಮದುವೆಯಾದ ಪುರುಷರು ಮನಸೋಲುತ್ತಿದ್ದಾರೆ ಎಂಬ ಆರೋಪವನ್ನು ಸೋಫಿಯಾ ವಿರುದ್ಧ ಹೊರಿಸಲಾಗಿದೆ. ಈ ಕಾರಣಕ್ಕಾಗಿ ರೊಬೋಟ್‌ಅನ್ನು ರಸ್ತೆಗೆ ಎಳೆತಂದ ಜನರು ಅದನ್ನು ಕಲ್ಲುಹೊಡೆದು ಸಾಯಿಸಲು ಮುಂದಾದರು. ಆದರೆ, ಲೋಹದ

ಕವಚ ಹೊಂದಿರುವುದರಿಂದ ರೋಬೋಟ್‌ಗೆ ಏನೂ ಆಗಲಿಲ್ಲ. ಹೀಗಾಗಿ ರೋಬೋಟ್‌ನ ಕುತ್ತಿಗೆಗೆ ಚೈನ್ ಹಾಕಿ ಕಟ್ಟಿ ರುಂಡ ಮುಂಡ ಬೇರೆ ಆಗುವವರೆಗೂ ರಸ್ತೆಯಲ್ಲಿ ಎಳೆದೊಯ್ಯಲಾಗಿದೆ. ಈ ಮೂಲಕ ರೋಬೋಟ್‌ನ ಶಿರಚ್ಛೇ ದ ಮಾಡಲಾಗಿದೆ. ಸಮೀಕ್ಷೆಯೊಂದರ ಪ್ರಕಾರ,ಸೌದಿ ಅರೇಬಿಯಾದ ಶೇ.79ರಷ್ಟು ಪುರುಷರು ರೋಬೋಟ್ ಅನ್ನು ಮರಣದಂಡನೆಗೆ ಒಳಪಡಿಸುವುದಕ್ಕೆ ಸಮ್ಮತಿ ಸೂಚಿಸಿದ್ದಾರಂತೆ. ಇದರ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ರೋಬೋಟ್ ಶಿರಚ್ಛೇದ ಮಾಡಿದ್ದು ಎಲ್ಲೆಡೆ ಚರ್ಚೆಯಾಗಿತ್ತು. ಆದರೆ ಇದೊಂದು ಶುದ್ಧ ಸುಳ್ಳು ವರದಿ. ಸೌದಿ ಅರೇಬಿಯಾದಲ್ಲಿ ನಾಗರಿಕತ್ವ ನೀಡಲಾದ ರೋಬೋಟ್‌ನ ಶಿರಚ್ಛೇದ ನಡೆದಿಲ್ಲ. ವಿಡಂಬನಾತ್ಮಕವಾಗಿ ಈ ಸುದ್ದಿಯನ್ನು ಡಫೆಲ್ ಬ್ಲಾಗ್ ಪ್ರಕಟಿಸಿದೆ ಎಂಬ ಸಂಗತಿ ಬಹಿರಂಗ ಗೊಂಡಿದೆ. ಹಾಗಾಗಿ ಈ ಸುದ್ದಿ ಸುಳ್ಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ
ಧಾರವಾಡ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿ ಮಾಡಿಸಲು ಹೈಕೋರ್ಟ್ ಸೂಚನೆ