ನಾನು ತಂದಿರುವ ವಿಧೇಯಕ ಜನ ವಿರೋಧಿ ಎಂದು ಆರ್'ಎಸ್'ಎಸ್ ಘೋಷಿಸಿದರೆ ರಾಜಕೀಯ ನಿವೃತ್ತಿ: ರಮೇಶ್ ಕುಮಾರ್

Published : Nov 14, 2017, 01:54 PM ISTUpdated : Apr 11, 2018, 01:00 PM IST
ನಾನು ತಂದಿರುವ ವಿಧೇಯಕ ಜನ ವಿರೋಧಿ ಎಂದು ಆರ್'ಎಸ್'ಎಸ್ ಘೋಷಿಸಿದರೆ ರಾಜಕೀಯ ನಿವೃತ್ತಿ: ರಮೇಶ್ ಕುಮಾರ್

ಸಾರಾಂಶ

ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕ ವಿಚಾರವಾಗಿ ಆರೋಗ್ಯ ಸಚಿವ ರಮೇಶ್​ ಕುಮಾರ್ ಉತ್ತರಿಸಿದ್ದಾರೆ.  ವೈದ್ಯರ ಮುಷ್ಕರಿಂದ ಮೂರು ಸಾವಾಗಿರುವುದು ನನ್ನ ಗಮನಕ್ಕೆ ಬಂದಿದೆ.  ಈ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮೃತರ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ರಮೇಶ್ ಕುಮಾರ್ ಪರಿಷತ್ ನಲ್ಲಿ ಹೇಳಿದ್ದಾರೆ.

ಬೆಂಗಳೂರು (ನ.14):  ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕ ವಿಚಾರವಾಗಿ ಆರೋಗ್ಯ ಸಚಿವ ರಮೇಶ್​ ಕುಮಾರ್ ಉತ್ತರಿಸಿದ್ದಾರೆ.  ವೈದ್ಯರ ಮುಷ್ಕರಿಂದ ಮೂರು ಸಾವಾಗಿರುವುದು ನನ್ನ ಗಮನಕ್ಕೆ ಬಂದಿದೆ.  ಈ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮೃತರ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ರಮೇಶ್ ಕುಮಾರ್ ಪರಿಷತ್ ನಲ್ಲಿ ಹೇಳಿದ್ದಾರೆ.

ವಿಧೇಯಕದ ಬಗ್ಗೆ ಸದನದಲ್ಲೇ ಪರವಿರೋಧ ವ್ಯಕ್ತವಾಯಿತು. ಅದಕ್ಕಾಗಿ ಜಂಟಿ ಪರಿಶೀಲನಾ ಸಮಿತಿ ಮಾಡಲಾಯಿತು. ಆ ಬಳಿಕ ತಮಗೆ ತೊಂದರೆ ಆಗಬಹುದು ಎಂದು ವೈದ್ಯರು ವಿರೋಧಿಸಿದ್ದಾರೆ. ನಿನ್ನೆ ಈ ಬಗ್ಗೆ ಸಿಎಂ ಜೊತೆ ಮಾತಾಡಿದ್ದೇನೆ. ಸಾರ್ವಜನಿಕರ ಅಭಿಪ್ರಾಯಕ್ಕೆ ತಲೆ ಬಾಗುತ್ತೇವೆ.  ಪ್ರತಿಭಟನೆಯಿಂದ ಜನರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ನನ್ನನ್ನ ಕೊಲೆಗಡಕ, ಮಕ್ಕಳಿಲ್ಲ ಎಂದೆಲ್ಲ ಹೇಳಿದ್ದಾರೆ. ನನಗೆ 68 ವರ್ಷ ವಯಸ್ಸಾಗಿದೆ. ನನಗೆ ಹಳೆಯದೆಲ್ಲ ನೆನಪಿಲ್ಲ,  ಈಶ್ವರಪ್ಪ ಹಿರಿಯರು, ಮುಂದೆ ಸಂಭವನೀಯ ಮುಖ್ಯಮಂತ್ರಿಗಳು ಕೂಡ.  ದೊಡ್ಡವರ ವಿಚಾರದಲ್ಲಿ ನಾನು ಹೆಚ್ಚು ಮಾತಾಡಲ್ಲ.  ನನಗೆ ಇಬ್ಬರು ಮಕ್ಕಳಿದ್ದಾರೆ.  ಒಬ್ಬರು ಮಗಳು, ಇನ್ನೊಬ್ಬ ಮಗ, ಅವರಿಬ್ಬರಿಗೂ ಮದುವೆಯಾಗಿ ಮಕ್ಕಳಾಗಿದ್ದಾರೆ. ನನಗೆ ಈಗ ಮಕ್ಕಳಿದ್ದಾರೋ ಇಲ್ವೋ ಅನ್ನೋದು ನೆನಪಾಗುತ್ತಿಲ್ಲ,  ವಯಸ್ಸಾಗಿದೆ ಎಂದು ರಮೇಶ್ ಕುಮಾರ್  ಭಾವುಕರಾದರು.  

ನಿನ್ನೆ ಪ್ರತಿಪಕ್ಷ ನಾಯಕರು ನನಗೆ ಕೊಲೆಗಡುಕ ಅಂದಿದ್ದಾರೆ. ನಾನು ಎಲ್ಲಿ ಕೊಲೆ ಮಾಡಿದ್ದೇನೆ.ಕೊಲೆಯಾದವರು ಯಾರು?  ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬುದನ್ನು ಪ್ರತಿಪಕ್ಷ ನಾಯಕರು ತಿಳಿಸಬೇಕು. ನಿನ್ನೆ ನನ್ನ ಮಗ ಕೂಡ ಇದರ ಬಗ್ಗೆ ದೂರವಾಣಿ ಮಾಡಿ ಪ್ರಶ್ನಿಸಿದ. ನಾನು ಕೊಲೆಗಡುಕ ಆದರೆ ನಾವಿಬ್ಬರೂ ನಾಗರೀಕನಾಗಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದಿದ್ದೇನೆ.

ನನ್ನ ಹಠದಿಂದಾಗಿ ಮೂವರು ಅಮಾಯಕರು ಮೃತಪಟ್ಟ ಆರೋಪ ಕೇಳಿ ನನಗೆ ನಿನ್ನೆ ಇಡೀ ರಾತ್ರಿ ನಿದ್ರೆ ಬಂದಿಲ್ಲ. ನಾನು ತಂದಿರುವ ವಿಧೇಯಕ ಜನ ವಿರೋಧಿ ಹೌದೋ ಅಲ್ಲವೋ ಎಂಬ ಬಗ್ಗೆ ಆರ್ ಎಸ್ ಎಸ್ ಪ್ರಮುಖರ ಸಭೆ ಕರೆದು ಚರ್ಚಿಸಿ. ಅವರೂ ಕೂಡ ಇದು ಜನ ವಿರೋಧಿ ಅಂತಾ ಘೋಷಿಸಿದ್ರೆ ನಾನು  ಆ ಕ್ಷಣವೇ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ. ನಾನು ನಿನ್ನೆಯೇ ಹಕ್ಕುಚ್ಯುತಿ ಹಾಕಬಹುದಿತ್ತು. ಆದರೆ ಅದರಿಂದ ಪ್ರಯೋಜನ‌ ಇಲ್ಲ ಎಂದು ಸುಮ್ಮನಾದೆ. ನಾನು ತಂದಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣವಿಧೇಯಕದ ಬಗ್ಗೆ ತೃಪ್ತಿ ಇದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?