
ಮುಂಬೈ(ಎ.07): ನಿರ್ಜಲೀಕರಣ ಸಮಸ್ಯೆಯಿಂದಾಗಿ ಕಳೆದ ವಾರ ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ವಿನೋದ್ ಖನ್ನಾ (70) ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರಬಹುದು ಎನ್ನಲಾಗಿದೆ. ತುಂಬಾ ಬಳಲಿದಂತೆ ಕಾಣುವ ಖನ್ನಾ, ತಮ್ಮ ಬೆಡ್‌ನಿಂದ ಮೇಲೆದ್ದು ನಿಲ್ಲಲು ಇಬ್ಬರ ನೆರವು ಪಡೆದಿರುವ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕ್ಯಾನ್ಸರ್‌ನಿಂದಲೇ ಅವರು ಈ ಪರಿಯಾಗಿ ಬಳಲಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಖನ್ನಾ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಅವರ ಪುತ್ರ ಹೇಳಿದ್ದಾರೆ.
ಆದರೆ, ಅವರು ಮೂತ್ರಪಿಂಡದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ‘ಕಳೆದ ಶುಕ್ರವಾರ ತೀವ್ರ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯದಲ್ಲಿ ಕೊಂಚ ಸುಧಾ ರಣೆಯಾಗಿದ್ದು, ಶೀಘ್ರ ಡಿಸ್ಚಾಜ್‌ರ್ ಆಗಲಿದ್ದಾರೆ,' ಎಂದು ಖನ್ನಾ ಪುತ್ರ ರಾಹುಲ್ ಹೇಳಿದ್ದ ಎರಡು ದಿನಗಳ ಬಳಿಕವೇ, ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಸಾಕಷ್ಟುಸಂಚಲನ ಮೂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.