
ಭಾರತದಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ, ಲಂಡನ್'ನಲ್ಲಿ ಕುಳಿತಿರುವ ಉದ್ಯಮಿ ವಿಜಯ್ ಮಲ್ಯ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಯಾವುದೇ ದೇಶಕ್ಕೆ ವಂಚನೆ ಮಾಡಿದ ಪ್ರಕರಣದಲ್ಲಿ ಅಲ್ಲ. ಬದಲಾಗಿ ಮತ್ತೊಂದು ಮದುವೆ ಆಗ್ತಿದ್ದಾರಂತೆ ಮದ್ಯದ ದೊರೆ.
62ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ..!
ಈಗಾಗಲೇ 62 ವರ್ಷ ಪೂರೈಸಿರುವ ವಿಜಯ್ ಮಲ್ಯ... ಮೂರನೇ ಮದುವೆಯಾಗಲು ಸಿದ್ಧರಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಕಿಂಗ್ ಫಿಷರ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್‌ವಾನಿ ಜತೆ ಸಂಬಂಧ ಹೊಂದಿದ್ದ ವಿಜಯ್‌ಮಲ್ಯ ಇದೀಗ ಆಕೆಯನ್ನು ಎರಡನೇಯ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗ್ತಿದ್ದಾರೆ ಎಂಬ ವಿಷಯ ಹರಿದಾಡ್ತಿದೆ.
ಈಗಾಗಲೇ ಮೊದಲು ಪತ್ನಿ ಸಮೀರಾ ತ್ಯಾಬ್ಜಿಗೆ ವಿಚ್ಛೇದನ ನೀಡಿದ ಎರಡನೇ ಪತ್ನಿ ರೇಖಾ ಮಲ್ಯ ಜೊತೆ ವಾಸವಾಗಿರುವ ವಿಜಯ್ ಮಲ್ಯ. ತನ್ನದೇ ಒಡೆತನದ ಕಿಂಗ್ ಫಿಷರ್ ಏರ್'ಲೈನ್ಸ್'ನಲ್ಲಿ ಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಜೊತೆ ಗೆಳೆತನ ಹೊಂದಿದ್ದರು. ಇದೀಗ, ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಒಟ್ಟಿನಲ್ಲಿ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬಂಧನದ ಭೀತಿ ಎದುರಿಸುತ್ತಿರುವ ಮಲ್ಯ ತನ್ನ ಶೋಕಿ ಮಾತ್ರ ನಿಲ್ಲಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.