ಅಕ್ರಮವಾಗಿ ಮಲ್ಯಾ 1301 ಕೋಟಿ ರೂ. ಹೂಡಿಕೆ

Published : Jul 13, 2017, 09:56 PM ISTUpdated : Apr 11, 2018, 12:53 PM IST
ಅಕ್ರಮವಾಗಿ ಮಲ್ಯಾ 1301 ಕೋಟಿ ರೂ. ಹೂಡಿಕೆ

ಸಾರಾಂಶ

ಈ ಬಗ್ಗೆ ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯನ್ವಯ ವಿಶೇಷ ಕೋರ್ಟ್'ಗೆ ದೂರು ಸಲ್ಲಿಸುವ ಮುನ್ನ ಈ ಮಾಹಿತಿ ತಿಳಿಸಿದೆ. ಭಾರತವಲ್ಲದೆ ಅಮೆರಿಕಾ, ಐರ್ಲಾಂಡ್, ಮಾರಿಷಸ್ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ವ್ಯವಹಾರೇತರ 13ಕ್ಕೂ ಹೆಚ್ಚು ಕಂಪನಿಗಳಲ್ಲಿ ಮಲ್ಯಾ ಹಣ ತೊಡಗಿಸಿದ್ದಾರೆ ಎಂದು ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.

ನವದೆಹಲಿ(ಜು.13): ಭಾರತೀಯ ಬ್ಯಾಂಕ್'ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲಂಡನ್'ನಲ್ಲಿ ತಲೆತಪ್ಪಿಸಿಕೊಂಡಿರುವ ಉದ್ದೇಶಿತ ಸುಸ್ತೀದಾರ ವಿಜಯ್ ಮಲ್ಯಾ ಭಾರತ ಹಾಗೂ ವಿದೇಶಿಗಳ ಹಲವು ವ್ಯವಹಾರೇತರ ಕಂಪನಿಗಳಲ್ಲಿ ಅಕ್ರಮವಾಗಿ 1301.67 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.

ಈ ಬಗ್ಗೆ ಅಕ್ರಮ ಹಣ ತಡೆಗಟ್ಟುವಿಕೆ ಕಾಯಿದೆಯನ್ವಯ ವಿಶೇಷ ಕೋರ್ಟ್'ಗೆ ದೂರು ಸಲ್ಲಿಸುವ ಮುನ್ನ ಈ ಮಾಹಿತಿ ತಿಳಿಸಿದೆ. ಭಾರತವಲ್ಲದೆ ಅಮೆರಿಕಾ, ಐರ್ಲಾಂಡ್, ಮಾರಿಷಸ್ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ವ್ಯವಹಾರೇತರ 13ಕ್ಕೂ ಹೆಚ್ಚು ಕಂಪನಿಗಳಲ್ಲಿ ಮಲ್ಯಾ ಹಣ ತೊಡಗಿಸಿದ್ದಾರೆ ಎಂದು ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.

ಇಡಿ ಸಂಸ್ಥೆಯು ಕಳೆದ ತಿಂಗಳು ಐಡಿಬಿಐ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಮಲ್ಯಾ ಹಾಗೂ ಇತರ 9 ಮಂದಿಯ ವಿರುದ್ಧ ದೂರು ದಾಖಲಿಸಿತ್ತು. ಮಲ್ಯಾ ಐಡಿಬಿಐ ಬ್ಯಾಂಕಿನಿಂದ  950 ಕೋಟಿ ರೂ.ಗೂ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಲು ಇವರು ನೆರವಾಗಿದ್ದರು. ಅಲ್ಲದೆ ಇವರ ವಿರುದ್ಧ ಬಂಧನದ ವಾರಂಟ್ ಕೂಡ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!