ರಾಷ್ಟ್ರಪತಿ ಚುನಾವಣೆ ಬೆಂಬಲ: ಎಎಪಿ ಘೋಷಣೆ

By Suvarna Web DeskFirst Published Jul 13, 2017, 8:33 PM IST
Highlights

ನಾವು ಸಹ ಒಮ್ಮತದ ಅಭ್ಯರ್ಥಿಯನ್ನು ಆರಿಸಿಕೊಳ್ಳಲು ಬಯಸುತ್ತೇವೆ. ಆದರೆ ಪ್ರಸ್ತುತ ಸನ್ನಿವೇಷದಲ್ಲಿ ನಾವು ಬಲಾಢ್ಯ ನಾಯಕಿಗೆ ಬೆಂಬಲ ನೀಡಲು ಇಚ್ಚಿಸುತ್ತೇವೆ' ಎಂದು ತಿಳಿಸಿದ್ದಾರೆ.

ನವದೆಹಲಿ(ಜು.13): ನೂತನ ರಾಷ್ಟ್ರಪತಿ ಚುನಾವಣೆಯಲ್ಲಿ ಎಎಪಿ ಪಕ್ಷವು ತನ್ನ ಬೆಂಬಲವನ್ನು ವಿರೋಧ ಪಕ್ಷಗಳ ಅಭ್ಯರ್ಥಿ ಮಾಜಿ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಅವರಿಗೆ ನೀಡುವುದಾಗಿ ತಿಳಿಸಿದೆ.

ಎಎಪಿ ಪಕ್ಷದ ರಾಷ್ಟ್ರೀಯ ವಕ್ತಾರರಾದ ಸಂಜಯ್ ಸಿಂಗ್ ತಿಳಿಸಿದ್ದು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಾಗಿ ನೇಮಕವಾಗುವವರು ಪಕ್ಷಪಾತ ರಾಜ್ಯಪಾಲರಾಗಿರಬೇಕು ಹಾಗೂ ನಾವು ಸಹ ಒಮ್ಮತದ ಅಭ್ಯರ್ಥಿಯನ್ನು ಆರಿಸಿಕೊಳ್ಳಲು ಬಯಸುತ್ತೇವೆ. ಆದರೆ ಪ್ರಸ್ತುತ ಸನ್ನಿವೇಷದಲ್ಲಿ ನಾವು ಬಲಾಢ್ಯ ನಾಯಕಿಗೆ ಬೆಂಬಲ ನೀಡಲು ಇಚ್ಚಿಸುತ್ತೇವೆ' ಎಂದು ತಿಳಿಸಿದ್ದಾರೆ.        

ಕೋವಿಂದ್ ಅವರಿಗೆ ಜೆಡಿಯು ಹಾಗೂ ಬಿಎಸ್'ಪಿ ಪಕ್ಷಗಳು ಸಹ ಬೆಂಬಲ ನೀಡಿವೆ. ಮುಂದಿನ ರಾಷ್ಟ್ರಪತಿ ಚುನಾವಣೆಯು ಜುಲೈ 20ರಂದು ಸಂಜೆ ನಡೆಯಲಿದ್ದು, ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಬಿಹಾರದ ಮಾಜಿ ರಾಜ್ಯಪಾಲ ರಮನಾಥ್ ಕೋವಿಂದ್ ಸ್ಪರ್ಧಿಸಿದ್ದಾರೆ.  

click me!