ವಿದ್ವತ್ ಆರೋಗ್ಯ ಸ್ಥಿತಿ ಗಂಭೀರ; ಸಿಂಗಾಪೂರ್’ನಿಂದ ವೈದ್ಯರು ಆಗಮಿಸಿವ ಸಾಧ್ಯತೆ

By Suvarna Web DeskFirst Published Feb 24, 2018, 6:02 PM IST
Highlights

ಗೂಂಡಾ ಮೊಹಮ್ಮದ್ ನಲಪಾಡ್ ಆಂಡ್ ಟೀಂ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಲ್ಲೆಯಾಗಿ ಒಂದು ವಾರವಾಗಿದ್ದು ಮಲ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.

ಬೆಂಗಳೂರು (ಫೆ.24): ಗೂಂಡಾ ಮೊಹಮ್ಮದ್ ನಲಪಾಡ್ ಆಂಡ್ ಟೀಂ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಲ್ಲೆಯಾಗಿ ಒಂದು ವಾರವಾಗಿದ್ದು ಮಲ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇಂದು ಮತ್ತೆ ವಿದ್ವತ್’ಗೆ ಹೈ ಫೀವರ್ ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆ ನೀಡಲು ಸಿಂಗಾಪೂರ್’ನಿಂದ ವೈದ್ಯರು ಮಲ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವ ಸಾಧ್ಯತೆಯಿದೆ.  ಕಳೆದ ಏಳು ದಿನದಿಂದ ನಿರಂತರವಾಗಿ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕಳೆದೆರಡು ದಿನಗಳಿಂದ ವಿದ್ವತ್’ಗೆ ಹೈ ಫೀವರ್ ಉಂಟಾಗಿದೆ. ನಲಪಾಡ್ ಅಂಡ್ ಟೀಂ ಬೂಟು ಕಾಲಿನಿಂದ ವಿದ್ವತ್ ಎದೆಗೆ ಒದ್ದಿರುವ ಶಂಕೆಯಿದ್ದು, ಬಲವಾಗಿ ಎದೆಗೆ ಪೆಟ್ಟು ಬಿದ್ದ ಹಿನ್ನಲೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಇಂದು ಮತ್ತೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಆರೋಗ್ಯ ಸರಿ ಇಲ್ಲದ ವೇಳೆ ದೂರ ಪ್ರಯಾಣ ಸರಿಯಲ್ಲ ಎಂದು ನಿರ್ಧರಿಸಿ, ಸಿಂಗಪೂರ್’ನಿಂದಲೇ ವೈದ್ಯರನ್ನು ಕರೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ನಿರಂತರವಾಗಿ ಸಿಂಗಾಪೂರ್ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದುಕೊಂಡೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ವಿದ್ವತ್ ಕುಟುಂಬ ಮೂಲದ ಮಾಹಿತಿ.

click me!