ಹ್ಯಾರೀಸ್ ಪುತ್ರನಿಗೆ ಜೈಲೇ ಗತಿ : ಕೋರ್ಟ್'ನಿಂದ ಅರ್ಜಿ ವಜಾ

First Published May 30, 2018, 5:22 PM IST
Highlights

ನಗರದ ಫರ್ಜಿ ಕಫೆಯಲ್ಲಿ ಫೆ.17ರಂದು ನಲಪಾಡ್ ಹಾಗೂ ಮತ್ತವರ ತಂಡ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಫೆ.19 ರಂದು ಬಂಧಿಸಿದ್ದರು.

ಬೆಂಗಳೂರು(ಮೇ.30): ಉದ್ಯಮಿ ಪುತ್ರ ವಿದ್ವತ್  ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್'ಗೆ 63ನೇ ಸಷೆನ್ಸ್ ಕೋರ್ಟ್ ಜಾಮೀನು ನಿರಾಕರಿಸಿದೆ.
63 ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ಆದೇಶ ನೀಡಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ನಾಶ ಮಾಡುವ ಸಾಧ್ಯತೆಯಿರುವುದರಿಂದ ಜಾಮೀನು ನಿರಾಕರಿಸಲಾಗಿದೆ.   ನಗರದ ಫರ್ಜಿ ಕಫೆಯಲ್ಲಿ ಫೆ.17ರಂದು ನಲಪಾಡ್ ಹಾಗೂ ಮತ್ತವರ ತಂಡ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಫೆ.19 ರಂದು ಬಂಧಿಸಿದ್ದರು.  ಕಳೆದ 101 ದಿನಗಳಿಂದ ನಲಪಾಡ್ ಸೆರೆವಾಸ ಅನುಭವಿಸುತ್ತಿದ್ದಾನೆ.

click me!