
ಶ್ರೀನಗರ(ಏ. 12): ಜಮ್ಮು-ಕಾಶ್ಮೀರದಲ್ಲಿ ಭಾರತದ ಸೇನೆ ದೌರ್ಜನ್ಯ ಎಸಗುತ್ತಿದೆ. ಕಾಶ್ಮೀರಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದೆ. ಯುವಕರ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಿದೆ ಎಂದು ಹುಯಿಲೆಬ್ಬಿಸುವ ಮಂದಿ ನೋಡಲೇಬೇಕಾದ ದೃಶ್ಯವೊಂದನ್ನು ಝೀನ್ಯೂಸ್ ಪ್ರಸಾರ ಮಾಡಿದೆ. ಮೊನ್ನೆ ನಡೆದ ಶ್ರೀನಗರ ಲೋಕಸಭೆ ಚುನಾವಣೆ ವೋಟ್ ಮಾಡಿ ಮನೆಗೆ ಹೋಗುವ ಸಂದರ್ಭದಲ್ಲಿ ಕೆಲ ಕಾಶ್ಮೀರೀ ಯುವಕರು ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆ ನಡೆಸುತ್ತಾರೆ. ಒಬ್ಬ ಯುವಕನಂತೂ ಕಾಲಿನಿಂದ ಒದ್ದು ದರ್ಪ ತೋರುತ್ತಾನೆ. ಬ್ಯಾಲೆಟ್ ಬಾಕ್ಸ್'ಗಳನ್ನು ಹೊತ್ತೊಯ್ಯುತ್ತಿದ್ದ ನಮ್ಮ ಸೇನಾ ಯೋಧರು ಬಹಳ ಸಂಯಮದ ವರ್ತನೆ ತೋರುತ್ತಾರೆ. ಈ ದೃಶ್ಯ ವಿಡಿಯೋದಲ್ಲಿದೆ. ಕಾಶ್ಮೀರಿಗಳು ಅಷ್ಟೊಂದು ಪುಂಡಾಡಿಕೆ ಮಾಡಿದರೂ ಯಾಕೆ ತಿರುಗಿ ಭಾರಿಸಲಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ತಾನು ಹೊತ್ತೊಯ್ಯುತ್ತಿದ್ದ ಬ್ಯಾಲೆಟ್ ಬಾಕ್ಸನ್ನು ರಕ್ಷಿಸಿಕೊಳ್ಳಬೇಕಿದ್ದರಿಂದ ತಾನು ಸುಮ್ಮನಾಗಬೇಕಾಯಿತು ಎಂದು ಆ ಯೋಧ ಹೇಳುತ್ತಾನೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಖಾರದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಯೋಧ ತೋರಿದ್ದು ಸಂಯಮವಲ್ಲ. ಬದಲಾಗಿ ಹೇಡಿತನ ಎಂದು ಜನರು ಸಿಟ್ಟುಹೊರಹಾಕಿದ್ದಾರೆ. ಪುಂಡಾಟ ತೋರಿದ ಕಾಶ್ಮೀರೀ ಯುವಕರಿಗೆ ಬಂದೂಕಿನಿಂದಲೇ ಯೋಧರು ಉತ್ತರ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಆರ್'ಪಿಎಫ್ ಜವಾನರ ಈ ವರ್ತನೆಯಿಂದ ಭಾರತೀಯ ಸೇನೆ ಅವಮಾನವಾದಂತಾಗಿದೆ ಎಂದೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ಮಾಹಿತಿ: ಝೀನ್ಯೂಸ್ ಜಾಲತಾಣ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.