
ನವದೆಹಲಿ(ಮಾ.04): ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಧಾನಿ ಮೋದಿ ಹಾಗೂ ಅವರು ಕೈಗೊಂಡ ನೋಟ್ ಬ್ಯಾನ್ ನಿರ್ಧಾರದ ಮೇಲೆ ನಿರ್ಮಿಸಿರುವ ಗ್ರೂಪ್ ಸಾಂಗ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ಏಳು ಮಂದಿ ಸ್ಟೇಜ್ ಮೇಲೆ ನಿಂತು ಹಾಡೊಂದನ್ನು ಹಾಡಿದ್ದು, ಇದು ಪ್ರಧಾನಿ ಮೋದಿಯ ವಿದೇಶ ಪ್ರವಾಸದಿಂದ ಆರಂಭವಾಗುತ್ತದೆ.
ಮೊದಲ ಸಾಲು ಹೀಗಿದೆ: घुमते हैं सारी दुनिया, जापान से लेकर रसिया, एंड सम टाइम्स ही स्टॉप्स ओवर इंडिया...अच्छे दिन का है सपना, स्वच्छ होगा भारत अपना....इस मुन्नाभाई का सर्किट है अमित शाह, मेक इन इंडिया और 4जी फ्री दिया ऑल थैंक्स टू हिज फ्रेंड्स इन एंटिला (ಇವರು ಪ್ರಪಂಚವಿಡೀ ತಿರುಗಾಡುತ್ತಾರೆ. ಜಪಾನ್'ನಿಂದ ರಷ್ಯಾದವರೆಗೆ ಹಾಗೂ ಕೆಲ ಸಮಯ ಭಾರತದಲ್ಲಿ. ನಮ್ಮ ಭಾರತ ಸ್ವಚ್ಛ ಭಾರತವಾಗುವ ಒಳ್ಳೆ ದಿನಗಳು ಬರಬಹುದು ಎಂಬ ಕನಸು ಕಾಣುವ ಈ ಮುನ್ನಾಭಾಯಿಗೆ ಅಮಿತ್ ಷಾರೆ ಸರ್ಕಿಟ್. ಮೇಕ್ ಇನ್ ಇಂಡಿಯಾ ಎಂದು 4ಜಿ ಫ್ರೀಯಾಗಿ ನೀಡಿದ್ದಾರೆ ಇದಕ್ಕಾಗಿ ಆ್ಯಂಟಿಲಾದಲ್ಲಿರುವ ಇವರ ಗೆಳೆಯರಿಗೆ ಧನ್ಯವಾದಗಳು).
ಇಷ್ಟೇ ಅಲ್ಲದೇ ರಾಹುಲ್, ಸೋನಿಯಾ ಹಾಗೂ ಕೇಜ್ರೀವಾಲ್'ರನ್ನೂ ಉಲ್ಲೇಖಿಸಿ 'ಮಿಡಲ್ ಫಿಂಗರ್ ದಿಯಾ ಟು ರಾಹುಲ್, ಸೋನಿಯಾ ಔರ್ ಕೇಜ್ರಿ ಕಾ ತೋ ಕೆಎಲ್'ಪಿಡಿ ಕಿಯಾ' ಎಂದಿದ್ದಾರೆ.
ಮುಂದಿನ ಸಾಲುಗಳಲ್ಲಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವೇನೋ ಸರಿಯಾಗಿತ್ತು. ಆದರೆ ಇದನ್ನು ಸರಿಯಾದ ಕ್ರಮಗಳೊಂದಿಗೆ ಜಾರಿಗೊಳಿಸಲಿಲ್ಲ. ಹೀಗಾಗಿ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಇದೇ ವೇಳೆ ಮಲ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನೂ ಇಲ್ಲಿ ಹಾಸ್ಯಾಸ್ಪದವಾಗಿ ತಿಳಿಸಿದ್ದಾರೆ.
'ಈಸ್ಟ್ ಇಂಡಿಯಾ ಕಾಮಿಡಿ' ಎಂಬ ಚಾನೆಲ್ ಮಾರ್ಚ್ 2ರಂದು ಯೂ ಟ್ಯೂಬ್'ಗೆ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಹಾಡು ಕೇಳುತ್ತಿರುವ ಪ್ರೇಕ್ಷಕರೂ ಆನಂದಿಸುತ್ತಿರುವುಇದು ಸ್ಪಷ್ಟವಾಗಿ ಕಂಡು ಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.