
ತಿರುವನಂತಪುರಂ: ತಾನು ಬಲವಂತದ ಮತಾಂತರ ಹೊಂದಿದ್ದು, ವಂಚನೆಯಿಂದ ತನ್ನ ಮದುವೆ ಆಗಿದ್ದಾಗಿ ಕೇರಳದ 25 ವರ್ಷದ ಯುವತಿಯೊಬ್ಬಳು ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದಾಳೆ.
ರಾಜ್ಯದಲ್ಲಿ ‘ಲವ್ ಜಿಹಾದ್’ ಸುದ್ದಿ ನಡುವೆಯೇ ಈ ಅರ್ಜಿ ಸಲ್ಲಿಕೆಯಾಗಿದೆ. ಸೌದಿ ಅರೇಬಿಯಾಕ್ಕೆ ತನ್ನನ್ನು ಕರೆದು ಕೊಂಡು ಹೋಗಿ, ಬಳಿಕ ಅಲ್ಲಿಂದ ಸಿರಿಯಾಗೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ತಾಣಗಳಿಗೆ ತನ್ನನ್ನು ಕರೆದೊಯ್ಯುವ ಯತ್ನಗಳು ನಡೆದವು ಎಂದು ಆಕೆ ಆರೋಪಿಸಿದ್ದಾಳೆ.
ತನ್ನ ಮದುವೆಯನ್ನು ರದ್ದುಗೊಳಿಸಿ ಎನ್‌ಐಎ ತನಿಖೆಗೆ ಸೂಚಿಸಬೇಕು ಎಂದು ಆಕೆ ಕೋರಿದ್ದಾಳೆ. ಮೂಲತಃ ಮಲಯಾಳಿಯಾದ ಈಕೆ ಹುಟ್ಟಿ ಬೆಳೆದಿದ್ದು ಗುಜರಾತ್‌ನಲ್ಲಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಈಕೆಗೆ ಮುಹಮ್ಮದ್ ರಿಯಾಜ್ ಎಂಬ ‘ಹೊಸ ಮಾಹೆ’ ಪಟ್ಟಣ ದವನ ಪರಿಚಯವಾಯಿತು. ಈ ವೇಳೆ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡರು.
ಬಳಿಕ ಈ ವಿಡಿಯೋವನ್ನೇ ಮುಂದಿಟ್ಟುಕೊಂಡ ರಿಯಾಜ್, ‘ಇಸ್ಲಾಂಗೆ ಮತಾಂತರ ಹೊಂದು ಮತ್ತು ತನ್ನನ್ನು ಮದುವೆಯಾಗು’ ಎಂದು ಈಕೆಯನ್ನು ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಇದಕ್ಕೆ ರಿಯಾಜ್‌ನ ತಾಯಿ ಕೂಡ ಕೈಜೋಡಿಸಿದಳು.
ಯುವತಿಗೆ ಇಸ್ಲಾಮಿಕ್ ಬೋಧನಾ ಶಾಲೆಗಳಿಗೆ ಕಳಿಸಲಾಯಿತು ಮತ್ತು ವಿವಾದಿತ ಝಾಕಿರ್ ನಾಯ್ಕ್‌ನ ಪ್ರವಚನಗಳನ್ನು ಕೇಳಿಸಲಾಯಿತು. ಈಕೆಯನ್ನು ಬಲವಂತವಾಗಿ ಮದುವೆಯಾದ ರಿಯಾಜ್, ಕಲ್ಲಿಕೋಟೆಗೆ ಕರೆದೊಯ್ದು ಹೆಸರನ್ನು ಆಯಿಷಾ ಎಂದು ಬದಲಿಸಿ ಆ ಹೆಸರಲ್ಲೇ ಪಾಸ್‌ಪೋರ್ಟ್ ಮಾಡಿಸಿದ.
ಸೌದಿ ಅರೇಬಿಯಾದ ಜೆಡ್ಡಾಗೆ ಕರೆದುಕೊಂಡು ಹೋದ. ಅಲ್ಲಿಂದ ಐಸಿಸ್ ಪ್ರಾಬಲ್ಯದ ಸಿರಿಯಾಗೆ ಕರೆದೊಯ್ಯಲು ಯತ್ನಿಸಲಾಯಿತು. ಈ ವೇಳೆ ಅದ್ಹೇಗೋ ಗುಜರಾತ್’ನಲ್ಲಿನ ತನ್ನ ಪಾಲಕರನ್ನು ಸಂಪರ್ಕಿಸಿ ಆಕೆ ಅಲ್ಲಿಂದಲೇ ವಿಮಾನ ಟಿಕೆಟ್ ಬುಕ್ ಮಾಡಿ ಅ.3 ಕ್ಕೆ ಗುಜರಾತ್‌ಗೆ ಮರಳಿದಳು ಎಂದು ಯುವತಿಯ ವಕೀಲ ಹೇಳಿದ್ದಾರೆ.
ಈಕೆಯ ಅರ್ಜಿಯ ವಿಚಾರಣೆ ಕೇರಳ ಹೈಕೋರ್ಟಲ್ಲಿ ನ.13ರಂದು ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.