ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ಐಟಿ ಬಲೆಗೆ ಸಿಕ್ಕಿಬಿದ್ದ ಹಂತಕರು ?

By Suvarna Web DeskFirst Published Nov 11, 2017, 1:26 PM IST
Highlights

ರೇಖಾಚಿತ್ರದ ಆಧಾರದ ಮೇಲೆ ಶಂಕಿತ ಹಂತಕರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಗೋಪ್ಯ ಸ್ಥಳದಲ್ಲಿ ಕಳೆದ ಒಂದು ವಾರದಿಂದ ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಬೆಂಗಳೂರು(ನ.11): ಪತ್ರಕರ್ತೆ ಗೌರಿ ಲಂಕೆಶ್​​ ಹತ್ಯೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್​ ದೊರಕಿದೆ. ಕೊನೆಗೂ  ಎಸ್'ಐಟಿ ಬಲೆಗೆ ಶಂಕಿತ ಮೂವರು ಹಂತಕರು ಸಿಕ್ಕಿದ್ದಾರೆ ಎನ್ನಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ.

ರೇಖಾಚಿತ್ರದ ಆಧಾರದ ಮೇಲೆ ಶಂಕಿತ ಹಂತಕರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಗೋಪ್ಯ ಸ್ಥಳದಲ್ಲಿ ಕಳೆದ ಒಂದು ವಾರದಿಂದ ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ರೇಖಾಚಿತ್ರ ಹೋಲಿಕೆಯ ಮೇಲೆ ಶಂಕಿತರ ಮೂವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ವಾರ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕರೆತರಲಾಗಿದೆ ಎನ್ನಲಾಗಿದೆ. ಭಾವಚಿತ್ರ ಹೋಲಿಕೆಯಿದ್ದ ಈ ಮೂವರ ಬಗ್ಗೆ ಗದಗದ ಎಸ್'ಪಿಗೆ ಸಾರ್ವಜನಿಕರು ದೂರು ನೀಡಿದ್ದರು.

ಈ ಮಾಹಿತಿಯನ್ನು ಆಧರಿಸಿ ಎಸ್ಐಟಿ ತಂಡ ಬೆಂಗಳೂರಿಗೆ ಕರೆತಂದಿದೆ ಎನ್ನಲಾಗಿದೆ. ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5 ರಂದು ಸಂಜೆ ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯ ನಂತರ ದೇಶಾದ್ಯಂತ ವಿವಿಧ ವಲಯದಿಂದ ಪ್ರತಿಭಟನೆ ನಡೆದಿತ್ತು. ಹತ್ಯೆಯನ್ನು ಭೇದಿಸಲು ರಾಜ್ಯ ಸರ್ಕಾರ 100 ಮಂದಿ ಸಿಬ್ಬಂದಿಯುಳ್ಳ ಎಸ್ಐಟಿ ತಂಡವನ್ನು ರಚಿಸಿತ್ತು.    

click me!