ರಾಜಸ್ತಾನದಿಂದ ಆಯ್ಕೆಯಾದ ವೆಂಕಯ್ಯನಾಯ್ಡುಗೆ ಮತನದಾನದ ಹಕ್ಕು ಸಿಕ್ಕಿದ್ದು ಹೇಗೆ?

By Internet DeskFirst Published Sep 26, 2016, 6:23 PM IST
Highlights

ಬೆಂಗಳೂರು(ಸೆ.26): ಈ ಹಿಂದೆ ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರೂ ಆಗಿದ್ದ ವೆಂಕಯ್ಯನಾಯ್ಡು ಅವರು, ಮತ್ತೊಮ್ಮೆ ರಾಜ್ಯದಿಂದಲೇ ಆಯ್ಕೆ ಬಯಸಿ, ಕೊನೆಗೆ ರಾಜಸ್ತಾನದಿಂದ ಆಯ್ಕೆಯಾದರು. ಈ ಮೂಲಕ ರಾಜ್ಯದೊಂದಿಗಿನ ನೇರ ಸಂಬಂಧವನ್ನು ಕಳೆದುಕೊಂಡಿದ್ದರು. ಆದರೆ, ಸೆ.28ರಂದು ನಡೆಯಲಿರುವ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಅವರೂ ಕೂಡ ಮತದಾನದ ಹಕ್ಕು ಪಡೆದಿದ್ದಾರೆ. ಈ ಬೆಳವಣಿಗೆ ಸದ್ಯ ಜಿಜ್ಞಾಸೆಗೆ ಕಾರಣವಾಗಿದೆ.

ಈ ಬಾರಿಯ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೂ ಮತದಾನದ ಹಕ್ಕು ನೀಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಹಿನ್ನೆಲೆಯಲ್ಲಿ ಸಂಬಂಸಿದ ಅಕಾರಿಗಳು ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿದ್ದಾರೆ. ವೆಂಕಯ್ಯನಾಯ್ಡು ಅವರ ಹೆಸರು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಇದೆ. ನಗರ ಮೂಲದ ಪ್ರತಿನಿಯಾದ ಕಾರಣಕ್ಕೆ ಅವರಿಗೆ ಮತದಾನ ಹಕ್ಕು ಸಿಕ್ಕಿದೆ. ಆದರೆ, ದೇಶದ ಇತರೆ ಯಾವುದೇ ಭಾಗದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆಯೇ ಎಂಬ ಬಗ್ಗೆಯೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಪರಿಶೀಲಿಸಿದೆ. ರಾಜಸ್ತಾನ ಚುನಾವಣಾ ಆಯೋಗಕ್ಕೂ ಪತ್ರ ಬರೆದು ಈ ಬಗ್ಗೆ ಸ್ಪಷ್ಟನೆ ಕೇಳಿದೆ. ಆದರೆ, ಅಲ್ಲಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ರಾಜಸ್ತಾನದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂಬುದನ್ನು ಆ ರಾಜ್ಯದ ಆಯೋಗದ ವೆಬ್‌ಸೈಟ್‌ನಲ್ಲೇ ಪರಿಶೀಲಿಸಿ ದೃಢಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾದವರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಸುಲಭವಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬೇಕಾದರೆ ಕನಿಷ್ಠ ಆರು ತಿಂಗಳು ನಿರ್ದಿಷ್ಟ ವಿಳಾಸದಲ್ಲಿ ನೆಲೆಸಿರುವ ಬಗ್ಗೆ ದಾಖಲೆ ಇರಬೇಕಾಗುತ್ತದೆ. ಅಲ್ಲದೇ ಕಂದಾಯ ವಿಭಾಗದ ಅಕಾರಿಗಳು ಪರಿಶೀಲಿಸಿ, ಖಾತ್ರಿಪಡಿಸಿಕೊಂಡ ಬಳಿಕವಷ್ಟೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿರುತ್ತದೆ. ಚುನಾವಣೆ ಘೋಷಣೆಯಾದಾಗ ಆ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ಪಾಲಿಕೆಯೇತರ ಸದಸ್ಯರ ಹೆಸರುಗಳನ್ನು ಗುರುತಿಸಿ ಮತದಾನದ ಹಕ್ಕು ನೀಡಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ವೆಂಕಯ್ಯ ನಾಯ್ಡುಗೆ ಮತದಾನದ ಹಕ್ಕು ಸಿಕ್ಕಿದ್ದು ಹೇಗೆ?

ರಾಜ್ಯಸಭೆಗೆ ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೆ, ಆ ಪ್ರದೇಶದ ಸ್ಥಳೀಯ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ (ಕೆಎಂಸಿ) ಕಾಯ್ದೆಯ ನಿಯಮ 7ಡಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ಉತ್ತರಪ್ರದೇಶ, ಬಿಹಾರದಲ್ಲೂ ಈ ವ್ಯವಸ್ಥೆ ಇದೆ. ಅದಾಗ್ಯೂ ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ, ರಾಜ್ಯಸಭೆ ಸದಸ್ಯರೂ ಆಗಿರುವ ವೆಂಕಯ್ಯ ನಾಯ್ಡು ಅವರಿಗೆ ಸಹಜವಾಗಿಯೇ ಪಾಲಿಕೆ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನದ ಹಕ್ಕು ಲಭ್ಯವಾಗಿದೆ.

click me!