ಬರಲಿದೆ ಸಾಲು ಸಾಲು ಹಬ್ಬ; ಗ್ರಾಹಕರಿಗೆ ತಟ್ಟಲಿದೆಯಾ ಬೆಲೆ ಏರಿಕೆ ಬಿಸಿ?

By Web DeskFirst Published Oct 2, 2018, 11:00 AM IST
Highlights

ತರಕಾರಿ, ಹಣ್ಣುಗಳ ಬೆಲೆಯಲ್ಲಿ ಸ್ಥಿರತೆ | ಟೊಮಟೋ, ಈರುಳ್ಳಿ ಪೂರೈಕೆ ಹೆಚ್ಚಳ | ಗ್ರಾಹಕರಿಗೆ ತುಸು ನಿರಾಳ 

ಬೆಂಗಳೂರು (ಅ. 02):  ನಗರದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಹಾಗೂ ಹೂವು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಹೆಚ್ಚಿದೆ.

ರಾಜಧಾನಿ ಮಾರುಕಟ್ಟೆಯಲ್ಲಿ ಬೀನ್ಸ್‌, ಹಾಗಲಕಾಯಿ, ಕ್ಯಾರೆಟ್‌, ಬೀಟ್‌ರೋಟ್‌ ಸೇರಿದಂತೆ ಇನ್ನಿತರೆ ಕೆಲ ತರಕಾರಿಗಳು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಈ ಹಿಂದೆ ದರ ಏರಿಕೆಯಿಂದಾಗಿ ಗ್ರಾಹಕರನ್ನು ಚಿಂತೆಗೀಡು ಮಾಡಿದ್ದ ಟೊಮಟೋ, ಈರುಳ್ಳಿ ಕೇಳುವವರಿಲ್ಲ. ಗುಣಮಟ್ಟದ ಟೊಮಟೋ ಮೂರು ಕೆ.ಜಿ.ಗೆ .50, ಸಾಧಾರಣ ಗಾತ್ರದ್ದು .10ಕ್ಕೆ ಖರೀದಿಯಾಗುತ್ತಿದೆ. ಈರೇಕಾಯಿ ಕೆ.ಜಿ. .40, ಬಟಾಣೆ .120, ಡಬಲ್‌ಬೀನ್ಸ್‌ .60ಕ್ಕೆ ಮಾರಾಟಗೊಳ್ಳುತ್ತಿವೆ. ಕೊತ್ತಂಬರಿ (ದೊಡ್ಡ ಕಟ್ಟು) 20ರಿಂದ 30, ನಿಂಬೆ, ತೆಂಗಿನಕಾಯಿ ಸೇರಿದಂತೆ ಕೆಲ ಪದಾರ್ಥಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಹೂವಿನ ಬೆಲೆ ಇಳಿಕೆ:

ಗೌರಿ ಗಣೇಶ ಹಬ್ಬದಲ್ಲಿ ಬಹುಬೇಡಿಕೆ ಕುದುರಿಸಿಕೊಂಡಿದ್ದ ಹೂವಿನ ದರ ಸಂಪೂರ್ಣ ಇಳಿಕೆಯಾಗಿದೆ. ಮಲ್ಲಿಗೆ ಮೊಗ್ಗು ಕೆ.ಜಿ. .100ರಿಂದ 120, ಕಾಕಡ .30-50, ಕನಕಾಂಬರ .250-300, ರೋಸ್‌ .200, ಸೇವಂತಿ ಮಾರಿಗೆ .30ಕ್ಕೆ ಖರೀದಿಯಾಗುತ್ತಿದೆ. ಪಿತೃಪಕ್ಷದ ಸಮಯದಲ್ಲಿ ಬೆಲೆ ಇಳಿಕೆ ಸಾಮಾನ್ಯ. ನಂತರದ ದಿನಗಳಲ್ಲಿ ಹಬ್ಬಗಳು ಪ್ರಾರಂಭವಾಗಲಿದ್ದು, ಬೆಲೆ ಹೆಚ್ಚಾಗಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಇಮ್ತಿಯಾಜ್‌.

ಕೆ.ಆರ್‌.ಮಾರುಕಟ್ಟೆ(ಕೆ.ಜಿ.ಗಳಲ್ಲಿ)

ತರಕಾರಿ    ಬೆಲೆ (.)

ಬೀನ್ಸ್‌    30

ಕ್ಯಾಪ್ಸಿಕಾಂ    30

ಹಾಗಲಕಾಯಿ    30

ಬೀಟ್‌ರೂಟ್‌    30

ಈರೇಕಾಯಿ    40

ಹಸಿಮೆಣಸಿನಕಾಯಿ    40

ಈರುಳ್ಳಿ    10-20

ಬಟಾಣೆ    120

ತೊಗರಿಕಾಯಿ    60

ಡಬಲ್‌ಬೀನ್ಸ್‌    60

ಟೊಮಾಟೋ 3 ಕೆ.ಜಿ.ಗೆ    50

ಕೊತ್ತಂಬರಿ (ದಪ್ಪ ಕಟ್ಟು)    20

ಹಣ್ಣುಗಳು

ದಾಳಿಂಬೆ    50

ಮೂಸಂಬಿ    60

ಸಿತಾಫಲ    80

ಸಪೋಟ    100

ಸೇಬು (ವಿವಿಧ ತಳಿ)    70-120

ದ್ರಾಕ್ಷಿ    100-    120

ಕಿತ್ತಳೆ (ವಿವಿಧ ತಳಿ)    40-100

ಗ್ರೀನ್‌ ಆ್ಯಪಲ್‌    180 

click me!