ಸಂಸದ ಶಾಸಕರ ವಾಪಸಾತಿಗೆ ಖಾಸಗಿ ಮಸೂದೆ

By Suvarna Web DeskFirst Published Feb 28, 2017, 6:14 PM IST
Highlights

‘ಆಯ್ಕೆಯಾದ ಸಂಸದ-ಶಾಸಕರಿಗೆ ಗರಿಷ್ಠ 2 ವರ್ಷ ಕಾಲಾವಕಾಶ ನೀಡಬೇಕು. ಅಷ್ಟರೊಳಗೆ ಅವರು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡದೇ ಹೋದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಮತ ಹಾಕಿದ ಮತದಾರರಲ್ಲಿ ಶೇ.75 ಮಂದಿ ಸಂಸದ/ಶಾಸಕನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರೆ ವಾಪಸ್ ಕರೆಸಿಕೊಳ್ಳುವ ಅವಕಾಶ ಇರಬೇಕು’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ನವದೆಹಲಿ(ಫೆ.28): ಸಂಸದರು ಮತ್ತು ಶಾಸಕರು ಜನಾಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡದಿದ್ದರೆ ಅವರನ್ನು ವಾಪಸ್ ಕರೆಸಿಕೊಳ್ಳಲು ಅವಕಾಶ ನೀಡುವ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಲೋಕಸಭೆಯಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದಾರೆ.

‘ಆಯ್ಕೆಯಾದ ಸಂಸದ-ಶಾಸಕರಿಗೆ ಗರಿಷ್ಠ 2 ವರ್ಷ ಕಾಲಾವಕಾಶ ನೀಡಬೇಕು. ಅಷ್ಟರೊಳಗೆ ಅವರು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡದೇ ಹೋದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಮತ ಹಾಕಿದ ಮತದಾರರಲ್ಲಿ ಶೇ.75 ಮಂದಿ ಸಂಸದ/ಶಾಸಕನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರೆ ವಾಪಸ್ ಕರೆಸಿಕೊಳ್ಳುವ ಅವಕಾಶ ಇರಬೇಕು’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

‘ಜನರಿಗೆ ಜನಪ್ರತಿನಿಗಳನ್ನು ಆಯ್ಕೆ ಮಾಡಲು ಮಾತ್ರ ಅಕಾರ ಇದ್ದರೆ ಸಾಲದು. ಸರಿಯಾಗಿ ಕೆಲಸ ಮಾಡದೇ ಇದ್ದರೆ ವಾಪಸ್ ಕರೆಸಿಕೊಳ್ಳಲೂ ಅಧಿಕಾರ ಇರಬೇಕು. ಅನೇಕ ದೇಶಗಳಲ್ಲಿ ಈ ಪ್ರಯೋಗ ನಡೆಸಲಾಗಿದೆ. ಈ ಬಗ್ಗೆ ಜನಪ್ರತಿನಿ ಕಾಯ್ದೆ-1951ಕ್ಕೆ ತಿದ್ದುಪಡಿ ತರಬೇಕು’ ಎಂದು ವರುಣ್ ಆಗ್ರಹಿಸಿದ್ದಾರೆ.

ಪ್ರಕ್ರಿಯೆ ಹೇಗೆ?:

ಚುನಾವಣೆ ನಡೆದ 2 ವರ್ಷದೊಳಗೆ ಯಾವುದೇ ಕ್ಷೇತ್ರದ ಮತದಾರ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿ ಶಾಸಕ/ಸಂಸದರ ವಾಪಸಾತಿಗೆ ಕೋರಬಹುದು. ಆದರೆ ಆ ಕ್ಷೇತ್ರದ ಶೇ.25ರಷ್ಟು ಮತದಾರರು ಅದಕ್ಕೆ ಸಹಿ ಹಾಕಿರಬೇಕು. ಅರ್ಜಿಯನ್ನು ಸ್ಪೀಕರ್ ಸ್ವೀಕರಿಸಿ ಚುನಾವಣಾ ಆಯೋಗಕ್ಕೆ ಕಳಿಸಬೇಕು. ಆಯೋಗವು ಸಹಿಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ನಂತರ ವಾಪಸ್ ಕರೆಸಿಕೊಳ್ಳುವ ಬಗ್ಗೆ ಕ್ಷೇತ್ರದ 10 ಸ್ಥಳದಲ್ಲಿ ಚುನಾವಣೆ ನಡೆಸಬೇಕು. ಇದರಲ್ಲಿ ಶೇ.75ರಷ್ಟು ಮತದಾರರು ವಾಪಸಾತಿ ಪರ ಇದ್ದರೆ, ಶಾಸಕ/ಸಂಸದನ ಆಯ್ಕೆ ರದ್ದಾಗುತ್ತದೆ. ಬಳಿಕ ಚುನಾವಣಾ ಆಯೋಗವು ಈ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಿಸಬೇಕು.

click me!