ಬಿಬಿಎಂಪಿ ಲೆಕ್ಕ ವಿಭಾಗಕ್ಕೂ ತಟ್ಟಿದ ವಾನಾಕ್ರೈ ರಾನ್ಸಮ್'ವೇರ್ ವೈರಸ್ ದಾಳಿ

Published : May 17, 2017, 03:25 PM ISTUpdated : Apr 11, 2018, 01:12 PM IST
ಬಿಬಿಎಂಪಿ ಲೆಕ್ಕ ವಿಭಾಗಕ್ಕೂ ತಟ್ಟಿದ ವಾನಾಕ್ರೈ ರಾನ್ಸಮ್'ವೇರ್ ವೈರಸ್ ದಾಳಿ

ಸಾರಾಂಶ

ವೈರಸ್ ವಾನಾಕ್ರೈ ರಾನ್ಸಮ್ ವೇರ್ ದಾಳಿ ರಾಜಧಾನಿ ಬೆಂಗಳೂರಿನ ಮೇಲೂ ಆಗಿದೆ. ಬೃಹತ್  ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕೆಲ ವಿಭಾಗದ ದಾಖಲಾತಿಗಳಿರುವ ಕಂಪ್ಯೂಟರ್ ಮೇಲೆ ವೈರಸ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಂಟಿ ವೈರಸ್ ( antivirus) ಸಿಸ್ಟಮ್ ಅಳವಡಿಸಿಕೊಂಡಿದ್ದು, ವೈರಸ್ ದಾಳಿಯನ್ನು ಮರೆಮಾಚುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡಿದರು.

ಬೆಂಗಳೂರು (ಮೇ.17): ವೈರಸ್ ವಾನಾಕ್ರೈ ರಾನ್ಸಮ್ ವೇರ್ ದಾಳಿ ರಾಜಧಾನಿ ಬೆಂಗಳೂರಿನ ಮೇಲೂ ಆಗಿದೆ. ಬೃಹತ್  ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕೆಲ ವಿಭಾಗದ ದಾಖಲಾತಿಗಳಿರುವ ಕಂಪ್ಯೂಟರ್ ಮೇಲೆ ವೈರಸ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಂಟಿ ವೈರಸ್ ( antivirus) ಸಿಸ್ಟಮ್ ಅಳವಡಿಸಿಕೊಂಡಿದ್ದು, ವೈರಸ್ ದಾಳಿಯನ್ನು ಮರೆಮಾಚುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡಿದರು.

ಪಾಲಿಕೆ ಲೆಕ್ಕ ವಿಭಾಗಕ್ಕೂ ವೈರಸ್ ದಾಳಿ ತಕ್ಷಣವೇ ಎಚ್ಚೆತ್ತುಕೊಂಡ ಪಾಲಿಕೆಯ ಐಟಿ ವಿಭಾಗ

ಅಂದಹಾಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ವೈರಸ್ ಅಟ್ಯಾಕ್ ಆಗಿದೆ. ಲೆಕ್ಕ ವಿಭಾಗ ಕಚೇರಿಯಲ್ಲಿನ ಸಿಸ್ಟಮ್ ಗಳು ಕಳೆದ ಸೋಮವಾರ ಹಾಗೂ ಮಂಗಳವಾರ ಕಾರ್ಯ ಸ್ಥಗಿತ ಮಾಡಿದ್ದವು ಎಂಬ ಮಾಹಿತಿ ತಿಳಿದು ಬಂದಿದೆ. ವಾನಾಕ್ರೈ ರಾನ್ಸಮ್'ವೇರ್ ವೈರಸ್ ದಾಳಿಯಿಂದ ಗಲಿಬಿಲಿ ಆದ ಪಾಲಿಕೆ ಅಧಿಕಾರಿಗಳು ಎರಡು ದಿನ ದೈನಂದಿನ ಕಾರ್ಯವನ್ನು ಸ್ಥಗಿತ ಮಾಡಿದ್ದರು ಎಂದು ಪಾಲಿಕೆಯ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ಸೋರಿಕೆ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಪಾಲಿಕೆ ಐಟಿ ವಿಭಾಗ ಸಂಬಂಧಪಟ್ಟ ಸಿಸ್ಟಮ್'ಗಳ ಸಾಫ್ಟ್'ವೇರ್ ಅಪ್'ಡೇಟ್ ಮಾಡಿದೆ. ಸಿಸ್ಟಮ್'ಗಳಲ್ಲಿ  ಆಂಟಿ ವೈರಸ್ (antivirus) ಅಪ್'ಡೇಟ್ ಆದ ಬಳಿಕ ಅಧಿಕಾರಿಗಳು ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ವಾನಾಕ್ರೈ ದಾಳಿ ಆಗಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳಲು ಪಾಲಿಕೆ ಅಧಿಕಾರಿಗಳು ಸಿದ್ದರಿಲ್ಲ. ಆ ರೀತಿಯ ವೈರಸ್ ದಾಳಿ ನಮ್ಮಲ್ಲಿ ಆಗಿಲ್ಲ. ಪಾಲಿಕೆಯ ಸರ್ವರ್ ನಿಯಂತ್ರಣ ಮಾಡುವ ವಲ್ಲಬ ಸಾಪ್ಟವೇರ್ ಸಿಬ್ಬಂದಿಗಳು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ನಲ್ಲಿ ಜಗತ್ತಿನಲ್ಲೆಡೆ ತಲ್ಲಣ ಸೃಷ್ಟಿಸಿರುವ ವಾನಾಕ್ರೈ ರಾನ್ಸಮ್ ವೇರ್ ವೈರಸ್ ದಾಳಿ ಪಾಲಿಕೆಯ ಮೇಲೂ ಆಗಿದೆ.ತೆರೆಯ ಮರೆಯಲ್ಲಿ ಸರಿಪಡಿಸಿಕೊಂಡ ಪಾಲಿಕೆ ಅಧಿಕಾರಿಗಳು ದಾಳಿ ವಿವರ ಮುಚ್ಚಿಡಲು ಯತ್ನಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ