
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪತ್ತು ಕಳೆದ 3 ವರ್ಷಗಳಲ್ಲಿ ಶೇ. 32ರಷ್ಟು ಹೆಚ್ಚಳವಾಗಿದೆ.
ಉತ್ತರ ಪ್ರದೇಶ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯೋಗಿ ಆದಿತ್ಯನಾಥ್, ರಿಟರ್ನಿಂಗ್ ಆಫಿಸರ್’ಗೆ ಸಲ್ಲಿಸಿರುವ ಅಫಿಡಾವಿಟ್’ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆ (2014)ಯ ಸಂದರ್ಭದಲ್ಲಿ ಯೋಗಿ ಆಸ್ತಿಯ ಒಟ್ಟು ಮೌಲ್ಯ ₹ 72,17,674.14 ಆಗಿತ್ತು. ಈಗ ಸಲ್ಲಿಸಿರುವ ಅಫಿಡಾವಿಟ್ ಪ್ರಕಾರ ಅವರ ಸಂಪತ್ತಿನ ಮೌಲ್ಯದಲ್ಲಿ ₹23.80 ಲಕ್ಷ ಹೆಚ್ಚಳವಾಗಿದ್ದು, ₹95,98,053.41 ಆಗಿದೆ.
ಅದರಲ್ಲಿ ಚಿನ್ನದ ಕಿವಿಯೋಲೆಗಳು, ಸರ ಹಾಗೂ ಮತ್ತಿತರ ಒಡವೆಗಳು ಸೇರಿವೆ. ಜತೆಗೆ, ₹ 1 ಲಕ್ಷದ ರಿವಾಲ್ವರ್ ಹಾಗೂ ₹ 80 ಸಾವಿರ ಮೌಲ್ಯದ ರೈಫಲ್ ಕೂಡಾ ಯೋಗಿ ಹೊಂದಿದ್ದಾರೆ.
ಗೋರಖ್’ಪುರದಿಂದ 5 ಬಾರಿ ಸಂಸದರಾಗಿರುವ ಯೋಗಿ, ಸಂಸದನಾಗಿ ಬರುವ ಸಂಬಳ ಮಾತ್ರ ಆದಾಯದ ಮೂಲವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.