ವಾಜಪೇಯಿಯನ್ನು ಸ್ಮರಿಸಿಕೊಂಡ ಇಮ್ರಾನ್ ಖಾನ್

By Web DeskFirst Published Dec 4, 2018, 2:16 PM IST
Highlights

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆಸಿಕೊಂಡಿದ್ದು, ಒಂದು ವೇಳೆ 2004ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಾಶ್ಮೀರ ವಿಚಾರವನ್ನು ಪರಿಹರಿಸಿಕೊಳ್ಳುವ ಭರವಸೆ ನೀಡಿದ್ದರು ಎಂದಿದ್ದಾರೆ. 

ಇಸ್ಲಮಾಬಾದ್ : ಭಾರತ ಮತ್ತು ಪಾಕಿಸ್ತಾನ ನಡುವೆ ಕಗ್ಗಂಟಾಗಿ ಉಳಿದಿರುವ  ಕಾಶ್ಮೀರ ಸಮಸ್ಯೆ ಯುದ್ಧದಿಂದ ಬಗೆಹರಿಯುವುದಿಲ್ಲ. ಮಾತುಕತೆಯಿಂದಷ್ಟೇ ಪರಿಹರಿಸಿಕೊಳ್ಳಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಟಿವಿ ಸಂದರ್ಶನವೊಂದರಲ್ಲಿ ಕಾಶ್ಮೀರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಮಸ್ಯೆ ಬಗೆಹರಿಸಿಕೊಳ್ಳಲು  ಮೂರು ಮಾರ್ಗಗಳಿದೆ.  ಶೀಘ್ರ ಮಾತುಕತೆ ನಡೆಯಬೇಕು,  ಮುಖಂಡರು ಪರಸ್ಪರ ಚರ್ಚೆ ನಡೆಸಬೇಕು, ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಅಲ್ಲದೇ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆದಿರುವ ಇಮ್ರಾನ್,  2004 ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಾಶ್ಮೀರ ವಿಚಾರವನ್ನು ಬಗೆಹರಿಸುವುದಾಗಿ ಸಮ್ಮೇಳನವೊಂದರಲ್ಲಿ ತಮ್ಮ ಬಳಿ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಉಭಯ ದೇಶಗಳೂ ಕುಳಿತು ಸೂಕ್ತ ಮಾತುಕತೆ ಮೂಲಕ ಈ ವಿಚಾರವನ್ನು ಬಗಹರಿಸಿಕೊಂಡಲ್ಲಿ ಯಾವುದೇ ಸಮಸ್ಯೆ ಎದುರಾಗದು. ಅಣುಶಕ್ತಿ ಹೊಂದಿದ ಎರಡೂ ದೇಶಗಳ ನಡುವೆ ಯುದ್ಧದಿಂದ ಮಾತ್ರವೇ ಕಾಶ್ಮೀರ ವಿಚಾರ ಪರಿಹಾರವಾಗದುವುದಿಲ್ಲ ಎಂದು ಸಂದರ್ಶನದ ವೇಳೆ ಇಮ್ರಾನ್ ಖಾನ್ ಹೇಳಿದರು.

ಪಾಕಿಸ್ತಾನ ತನ್ನ ಪಕ್ಕದ ದೇಶಗಳೊಂದಿಗೆ ಶಾಂತಿಯಿಂದಿರಲೂ ಬಯಸುತ್ತದೆಯೇ ಹೊರತು, ಧ್ವೇಷವನ್ನು ಬಯಸುವುದಿಲ್ಲ. ಭಾರತದಲ್ಲಿ ಶೀಘ್ರದಲ್ಲೇ ಲೋಕಸಭಾ ಚುನಾವಣೆ ನಡೆಯಲಿದ್ದು,ಅದಕ್ಕೂ ಮುನ್ನ ಕಾಶ್ಮೀರ ವಿಚಾರವನ್ನು ಬಗೆಹರಿಸಿಕೊಳ್ಳುವುದು ಒಳಿತು ಎಂದು ಹೇಳಿದ್ದಾರೆ. 

click me!