
ಬೆಂಗಳೂರು : ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ, ಹಾಲಿ ಶಾಸಕ ಪ್ರಿಯಾ ಕೃಷ್ಣ ಅವರು ಮರು ಆಯ್ಕೆ ಬಯಸುವುದು ಖಚಿತ. ಇನ್ನು ಬಿಜೆಪಿಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೊ ಅಥವಾ ಬೇಡವೊ ಎಂಬ ಗೊಂದಲದಲ್ಲಿದ್ದಾರೆ. ಪಕ್ಷದಿಂದಲೂ ಮೊದಲ ಆಯ್ಕೆ ಸೋಮಣ್ಣ ಅವರೇ. ತಮಗೆ ಟಿಕೆಟ್ ಬೇಡ ಎಂದು ನಿರ್ಧರಿಸಿದಲ್ಲಿ ಬೇರೆ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸು ವುದೂ ಬಹುತೇಕ ಅವರೇ.
ಸೋಮಣ್ಣ ಮನದಲ್ಲಿ ತಮ್ಮ ಪುತ್ರ ಡಾ.ಅರುಣ್ ರಾಜಕೀಯ ಪ್ರವೇಶಕ್ಕೆ ದಾರಿ ಮಾಡಿಕೊಡುವ ಆಲೋಚನೆ ಇದೆ.
ಆದರೆ, ಪಕ್ಷ ಇದಕ್ಕೆ ಒಪ್ಪುವ ಸಾಧ್ಯತೆ ತೀರಾ ಕಡಮೆ. ಸೋಮಣ್ಣ ನಂತರದ ಸ್ಥಾನದಲ್ಲಿ ಬಲವಾಗಿ ಕೇಳಿಬರುತ್ತಿರುವ ಹೆಸರು ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಅವರದ್ದು. ಸಂಘ ಪರಿವಾರದೊಂದಿಗೂ ಉತ್ತಮ ಸಂಬಂಧ ಹೊಂದಿರುವ ಉಮೇಶ್ ಅವರ ಬಗ್ಗೆ ಪಕ್ಷದಲ್ಲೂ ಒಲವಿದೆ. ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಕೊರತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.