ಉತ್ತರ ಪ್ರದೇಶದ ‘ಹಜ್ ಭವನ’ದ ಗೋಡೆಗಳಿಗೆ ಕೇಸರಿ ಬಣ್ಣ

By Suvarna Web DeskFirst Published Jan 5, 2018, 5:37 PM IST
Highlights
  • ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆ
  • ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ

ಲಕ್ನೋ: ಉತ್ತರ ಪ್ರದೇಶದ ಹಜ್ ಭವನ ಆವರಣ ಗೋಡೆಗಳಿಗೆ ಶುಕ್ರವಾರ ‘ಕೇಸರಿ’ ಬಣ್ಣವನ್ನು ಬಳಿಯಲಾಗಿದೆ. ಕೇಸರಿ ಬಣ್ಣವು ಹಿಂದೂಗಳಿಗೆ ಪವಿತ್ರವಾಗಿದೆ.

ಆದರೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಯುಪಿ ಸಚಿವ ಮೊಹ್ಸಿನ್ ರಝಾ, ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆಯೆಂದು ಹೇಳಿದ್ದಾರೆ.

Latest Videos

ಇದರಲ್ಲೇನು ವಿವಾದಾತ್ಮಕ ವಿಷಯವಿಲ್ಲ; ಕೇಸರಿ ಬಣ್ಣವು ಶಕ್ತಿಯುತ ಹಾಗೂ ಹೊಳೆಯುವ ಬಣ್ಣ, ಅದರಿಂದ ಕಟ್ಟಡವು ಸುಂದರವಾಗಿ ಕಾಣಿಸುತ್ತದೆ, ಎಂದು ಅವರು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ‘ಕೇಸರಿಕರಣ’ ನಡೆಸುತ್ತಿದೆಯೆಂದು  ಪ್ರತಿಪಕ್ಷಗಳು ಆರೋಪಿಸಿವೆ.

ಈ ಹಿಂದೆ, ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ ಬಳಿಯಲಾಗಿದೆ.

(ಏಎನ್ಐ ಚಿತ್ರ)

click me!