ಮತ್ತೆ ಸಂಪುಟ ಪುನರ್ ರಚನೆ: 23 ಸಚಿವರ ಪ್ರಮಾಣವಚನ!

By Web DeskFirst Published Aug 21, 2019, 4:24 PM IST
Highlights

ಮತ್ತೆ ಸಂಪುಟ ಪುನರ್ ರಚನೆಗೆ ಸರ್ಕಾರದ ನಿರ್ಧಾರ! 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ| ಅಧಿಕಾಕ್ಕೆ ಬಂದು ಎರಡುವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಪುನರ್ ರಚನೆ| ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರ| ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲೆ ಆನಂದಿಬೆನ್ ಪಟೇಲ್|

ಲಕ್ನೋ(ಆ.21): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಸಂಪುಟ ಪುನರ್ ರಚನೆ ಮಾಡಲಾಗಿದೆ.

ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಈ ಬಾರಿ ಬರೋಬ್ಬರಿ 23 ಹೊಸ ಶಾಸಕರಿಗೆ ಯೋಗಿ ಸಚಿವ ಸ್ಥಾನ ಕರುಣಿಸಿ ಗಮನ ಸೆಳೆದಿದ್ದಾರೆ.

ಇಂದು ರಾಜಭವನದಲ್ಲಿ 23 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

शपथ ग्रहण समारोह में मा. राज्‍यपाल श्रीमती व मुख्‍यमंत्री श्री के साथ नवनियुक्‍त मंत्रीगण। pic.twitter.com/djIBgOkUxm

— BJP Uttar Pradesh (@BJP4UP)

6 ಶಾಸಕರು ಸಂಪುಟ ದರ್ಜೆ ಸಚಿವರಾಗಿ,  6 ಶಾಸಕರು ರಾಜ್ಯ ಸ್ವತಂತ್ರ ಪ್ರಭಾರ ಸಚಿವರಾಗಿ ಮತ್ತು 11 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದು ವಿಶೇಷ.

ಇದೇ ವೇಳೆ ಪ್ರಸ್ತುತ ನಾಲ್ವರು ರಾಜ್ಯ ಖಾತೆ ಸಚಿವರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.
 

click me!