ಸೆ. 11 ರಿಂದ 13ರವರೆಗೆ ಎಲ್ಲೆಲ್ಲಿ ಭಾರೀ ಮಳೆ ಬೀಳಲಿದೆ?

By Web DeskFirst Published Sep 7, 2018, 7:01 PM IST
Highlights

ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು ಎಲ್ಲ ನದಿಗಳುನ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾರೀ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು ಸಾವು-ನೋವುಗಳು ಸಂಭವಿಸುತ್ತಿವೆ.

ಲಕ್ನೋ[ಸೆ.9] ಉತ್ತರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಇದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಈಗಾಗಲೇ 30ಕ್ಕೂ ಅಧಿಕ ಸಾವು ಸಂಭವಿಸಿದ್ದು  ಗಂಗಾ, ರಾಮಗಂಗಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. 

ಇನ್ನು ನದಿ ತಟದ ಪ್ರದೇಶಗಳಲ್ಲಿ ವಾಸ ಮಾಡುವ ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು 27 ಜಿಲ್ಲೆಗಳು ಪ್ರವಾಹದ ತತ್ತರಿಸಿದ್ದು ಇಲ್ಲಿರುವ 806 ಹಳ್ಳಿಗಳೂ ಸಮಸ್ಯೆ ಎದುರಿಸುತ್ತಿವೆ. 

ಸೆಪ್ಟೆಂಬರ್ 11 ರಿಂದ 13ರವರೆಗೆ ಭಾರೀ ಪ್ರಮಾಣ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ  ನೀಡಿದೆ. ಬುಂದೇಲಖಂಡ ಪ್ರದೇಶ ಪ್ರವಾಹ ಸ್ಥಿತಿಯನ್ನು ಎದುರಿಸುವ ಸಾಧ್ಯತೆ ಇದ್ದು ಸರಕಾರ ಸಕಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

click me!